ಪಾರ್ಕ್ ಗೆ ಬಂದ ಪ್ರೇಮಿಗಳಿಬ್ಬರು ಪೊದೆಯಲ್ಲಿ ಕುಳಿತು ರೊಮ್ಯಾನ್ಸ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಜನರು ವೀಡಿಯೋ ನೋಡಿ ಕಮೆಂಟ್ ಮಾಡುತ್ತಾ ತಗ್ಲಾಕೊಂಡ ಜೋಡಿಯನ್ನು ತಮಾಷೆ ಮಾಡಿದ್ದಾರೆ. ಪಾರ್ಕ್ ಬೆಂಚ್ ಹಿಂದಿನ ಪೊದೆಯಲ್ಲಿ ಜೋಡಿಯೊಂದು ರೊಮ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಯುವಕನೋರ್ವ ವೀಡಿಯೋ ಮಾಡಿದ್ದಾನೆ.
ಸದ್ಯ ಈ ವೀಡಿಯೋ ವೈರಲ್ ಆಗುತ್ತಿದ್ದು, ಆದ್ರೆ ಸ್ಥಳ ಯಾವುದೇ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ವೀಡಿಯೋ ಮಾಡುತ್ತಿದ್ದವನ ಮೇಲೆ ಯುವಕ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಬೆಂಚ್ ಹಿಂದಿರುವ ಪೊದೆಯಲ್ಲಿ ಹುಡುಗ-ಹುಡುಗಿ ತಬ್ಬಿಕೊಂಡು ರೊಮ್ಯಾನ್ಸ್ ಮಾಡುತ್ತಿರುವಾಗ ಹಿಂದಿನಿಂದ ಓರ್ವ ವ್ಯಕ್ತಿ ವೀಡಿಯೋ ಮಾಡುತ್ತಿರೋದನ್ನು ಯುವತಿ ನೋಡಿ ಶಾಕ್ ಆಗುತ್ತಾಳೆ. ಆಕೆಯ ಜೊತೆಯಲ್ಲಿದ್ದ ಯುವಕ ಕೋಪದಿಂದ ಯಾಕೆ ವೀಡಿಯೋ ಮಾಡುತ್ತಿದ್ದೀಯಾ? ಯಾರು ನೀನು ಎಂದು ಕೋಪದಿಂದ ಕೇಳುವುದನ್ನು ವೀಡಿಯೋದಲ್ಲಿ ಗಮನಿಸಬಹುದಾಗಿದೆ.
ಆಗಸ್ಟ್ 8 ರಂದು ಹಂಚಿಕೊಳ್ಳಲಾದ ಈ ವೀಡಿಯೋ 6.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ನೀವು ವೀಡಿಯೋ ಮಾಡಿದ್ದು ತಪ್ಪು, ಯಾರೇ ಆಗಿರಲಿ ಇನ್ನೊಬ್ಬರ ಗೌಪ್ಯತೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ರೀತಿ ಬೇರೆಯವರ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕುವುದು ತುಂಬಾ ತಪ್ಪು’ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಇದೆಂತಾ ಅಸಹ್ಯ ಎಂದು ಹೇಳಿದ್ದಾರೆ.










