ಚಿಕ್ಕಮಗಳೂರು : ಮಳಲೂರಿನ ಕಂಬಿಹಳ್ಳಿ ಗ್ರಾಮದ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಡಿ.ಎಂ. ಧನಲಕ್ಷ್ಮೀಕುಮಾರಿ ಹಾಗೂ ಕೆ.ಹುಲಿಯಪ್ಪ ಗೌಡ ಅವರ ಪುತ್ರಿ *ಮನಸ್ಮಿತಾ ಅವರಿಗೆ ಬ್ರಿಗೇಡಿಯರ್ ಅರ್ಜುನ್ ಸೆಗನ್, ಎಸ್.ಎಂ ಅವರು ಇತ್ತೀಚಿಗೆ ದಿ ರಿಯಲ್ ಹೀರೋ ಆಫ್ ನೇಷನ್ ಎಕ್ಸ ಸರ್ವಿಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಾಧನೆಯ ಪ್ರಮಾಣಪತ್ರ ನೀಡಿ ಗೌರವಿಸಿದ್ದಾರೆ.*
ಮನಸ್ಮಿತಾ ಅವರು ಕೇವಲ 15 ತಿಂಗಳ ವಯಸ್ಸಿನಲ್ಲಿ 1115 ವಸ್ತುಗಳನ್ನು ಗುರುತಿಸಿದ ವಿಶ್ವದ ಮೊಟ್ಟ ಮೊದಲ ಮಗುವಾಗಿದ್ದು,ತನ್ನ ಅಸಾಧಾರಣ ನೆನಪಿನ ಶಕ್ತಿಯಿಂದ 60 ನಿಮಿಷದಲ್ಲಿ ಸಾವಿರಕ್ಕಿಂತಲೂ ಹೆಚ್ಚು ವಸ್ತುಗಳನ್ನು ಗುರುತಿಸಬಲ್ಲರು, ಈ ನಿಟ್ಟಿನಲ್ಲಿ ಈಗಾಗಲೇ ಮನಸ್ಮಿತ ಅವರು ಒಂದು ರಾಷ್ಟ್ರ ಪ್ರಶಸ್ತಿ, ನಾಲ್ಕು ರಾಜ್ಯ ಪ್ರಶಸ್ತಿಗಳು, ಹಾಗೂ ಎರಡು ಜಾಗತಿಕ ಮಟ್ಟದ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಇದೀಗ “ದಿ ರಿಯಲ್ ಹೀರೋ ಆಫ್ ನೇಷನ್ ಎಕ್ಸ್ ಸರ್ವಿಸ್ ಮ್ಯಾನ್ ವೆಲ್ಫೇರ್ ಅಸೋಸಿಯೇಷನ್ ದಾಖಲೆಗಳಲ್ಲಿ ಮನಸ್ಮಿತ ಅವರ ಅಸಾಧಾರಣ ಗ್ರಹಣ ಶಕ್ತಿ ಮತ್ತು ಅವರ ಸಾಧನೆ ರಾಷ್ಟ್ರೀಯ ಹೆಮ್ಮೆಗೆ ಅರ್ಹವಾದ ಅಪರೂಪದ ಮತ್ತು ಐತಿಹಾಸಿಕ ಸಾಧನೆಯಾಗಿ ನೋಂದಾಯಿಸಲಾಗಿದೆ.
ಈ ನಿಟ್ಟಿನಲ್ಲಿ ಪುಟಾಣಿ ಮನಸ್ಮಿತಾ ಅವರಿಗೆ ಬ್ರಿಗೇಡಿಯರ್ ಅರ್ಜುನ್ ಸೆಗನ್, ಎಸ್.ಎಂ ಅವರು ಸಾಧನೆಯ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ ಹಾಗೂ ಮನಸ್ಮಿತ ಅವರನ್ನು ಕುರಿತು ವಯಸ್ಸು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ದಿ ರಿಯಲ್ ಹೀರೋ ಆಫ್ ನೇಷನ್ ಎಕ್ಸ್ ಸರ್ವಿಸ್ ಮ್ಯಾನ್ ವೆಲ್ಫೇರ್ ಅಸೋಸಿಯೇಷನ್ ನ ಪ್ರೆಸ್ಸಿಡೆಂಟ್ ವೇಲು ಬಲರಾಮ್ ಹಾಗೂ ಇತರ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










