ಪುತ್ತೂರು : ಬಸ್ಸಿಗೆ ಕಲ್ಲು ತೂರಾಟ – ಐವರ ಬಂಧನ…

364
firstsuddi

ಮಂಗಳೂರು: ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ ಸಮಯದಲ್ಲಿ ಕಿಡಿಗೇಡಿಗಳು ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಿಧ್ದೀಕ್ (33 ವರ್ಷ),   ಕೆ ಹಂಝ  (38 ವರ್ಷ),  ಅಭೀಬ್ ಫೈಸಲ್ ( 29 ವರ್ಷ)  ಅಬ್ದುಲ್  ಸಮೀರ್ (30ವರ್ಷ) ಹಾಗೂ ಪುತ್ತೂರು ಕೊಡಿಪ್ಪಾಡಿ ನಿವಾಸಿ  5.ಇಸ್ಮಾಯಿಲ್ (23ವರ್ಷ) ಎಂದು ಗುರುತಿಸಲಾಗಿದೆ.

ಸೋಮವಾರ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಬಕ ಗ್ರಾಮದ ಪೋಳ್ಯ  ಖಾಸಗಿ ಬಸ್ ಮತ್ತು ಕಾರಿನ ಮಧ್ಯೆ ಅಫಘಾತ ಸಂಭವಿಸಿದ್ದು ಈ ಅಫಘಾತದಲ್ಲಿ ಕಾರು ಚಾಲಕ ಅಬ್ದುಲ್‌ ಹಕೀಂ ಎಂಬವರು ಮೃತಪಟ್ಟಿದ್ದರು. ಇದರಿಂದ ಕೋಪಗೊಂಡ ಆರೋಪಿಗಳು ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದು, ಅದರ ಪರಿಣಾಮ ಬಸ್ಸಿನ ಎರಡೂ ಬದಿಯ ಎಲ್ಲಾ ಗ್ಲಾಸ್ ಗಳನ್ನು ಪುಡಿ ಮಾಡಿದ್ದರು. ಹಾಗೂ ಬಸ್ ನ್ನು ಹಾನಿಗೊಳಿಸಿದ್ದರು. ಇದರಿಂದ ಬಸ್ಸಿಗೆ  ಅಂದಾಜು 60,000/- ರೂ ಮೌಲ್ಯದ ನಷ್ಟ ಉಂಟಾಗಿದ್ದು, ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.