ಪುನೀತ್ ರಾಜ್‍ಕುಮಾರ್ 47ನೇ ಹುಟ್ಟುಹಬ್ಬ – ವಿಶ್ವದಾದ್ಯಂತ ಜೇಮ್ಸ್ ಗೆ ಭರ್ಜರಿ ಸ್ವಾಗತ…

96
firstsuddi

ಬೆಂಗಳೂರು: ಇಂದು ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅವರ 47ನೇ ಜನ್ಮದಿನ. ಇದೇ ಮೊದಲ ಬಾರಿಗೆ ಪುನೀತ್ ಇಲ್ಲದೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಅವರಿಲ್ಲ ಎಂಬ ನೋವಿನಲ್ಲೇ ಅಭಿಮಾನಿಗಳು ಬರ್ತ್ ಡೇ ಆಚರಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಅವರ ಸಮಾಧಿಗೆ ಅಭಿಮಾನಿಗಳ ದಂಡೇ ಆಗಮಿಸುತ್ತಿದೆ.

ನಿನ್ನೆ ರಾತ್ರಿ ಪುನೀತ್ ಸಮಾಧಿ ಸ್ಥಳಕ್ಕೆ ಆಗಿಮಿಸಿದ್ದ ಪುನೀತ್ ರಾಜ್ ಕುಮಾರ್ ಕುಟುಂಬದವರು ಪುನೀತ್ ಸಮಾಧಿಯ ದರ್ಶನ ಪಡೆದು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಅಪ್ಪುಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.

ಇಂದೇ ದೊಡ್ಮನೆ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ವಿಶ್ವಾದ್ಯಂತ ತೆರೆಗಪ್ಪಳಿಸಿದೆ. ಇದೇ ಮೊದಲ ಬಾರಿಗೆ ಜೇಮ್ಸ್ ವಿಶ್ವದೆಲ್ಲೆಡೆ 4000 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಚಿತ್ರಮಂದಿರಗಳ ಮುಂದೆ ಪುನೀತ್ ರಾಜ್ ಕುಮಾರ್ ಅವರ ಬೃಹತ್ ಕಟೌಟ್ ಗಳು ರಾರಾಜಿಸುತ್ತಿವೆ.

ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 47ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ.