ಬೆಂಗಳೂರು : ಮಹಿಳೆಯೊಬ್ಬರು ಪೊಲೀಸರೊಂದಿಗೆ ರಾದ್ಧಾಂತ ಮಾಡಿ, ಪೊಲೀಸ್ ಪೇದೆಯ ಕೈಯನ್ನೇ ಕಚ್ಚಿದ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದೆ.
ನಿನ್ನೆ ಸಂಜೆ ಈ ಘಟನೆ ನಡೆದಿದೆ. ಕೋವಿಡ್ ಹಿನ್ನಲೆ ಅಂಗಡಿ ಮುಂಗಟ್ಟುಗಳನ್ನು ಬೇಗ ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ನಿನ್ನೆ ಸಹ ಫುಟ್ ಪಾತ್ ಮೇಲಿನ ಅಂಗಡಿಗಳನ್ನು ಪೊಲೀಸರು ತೆರವು ಮಾಡುತ್ತಿದ್ದರು. ಈ ವೇಳೆ ಶಾಪಿಂಗ್ ಗೆ ಬಂದಿದ್ದ ಮಹಿಳೆ ಜನರಿಗೆ ಯಾಕೆ ಸಮಸ್ಯೆ ಕೊಡುತ್ತಿದ್ದೀರಾ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಜೊತೆಗೆ ಮಹಿಳೆ ಪೊಲೀಸರ ವಿಡಿಯೋ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮೊಬೈಲ್ ಕೊಡಿ ಎಂದು ಪೊಲೀಸರು ಕೇಳಿದಾಗ, ಗಲಾಟೆ ಮಾಡಿದ ಮಹಿಳೆ, ಪೊಲೀಸ್ ಪೇದೆಯ ಕೈಯನ್ನೇ ಕಚ್ಚಿದ್ದಾರೆ.
ಈ ಬಗ್ಗೆ ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.










