ಬಣಕಲ್: ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವ ಸಲುವಾಗಿ ಹೋಬಳಿ ಮಟ್ಟದಿಂದ ಪ್ರತಿ ಗ್ರಾಮ ಮಟ್ಟದಲ್ಲಿ ಘಟಕ ರಚಿಸಿ ಕನ್ನಡ ನಾಡು ನುಡಿಯನ್ನು ಬೆಳೆಸಲು ಪ್ರಯತ್ನಿಸಲಾಗುವುದು ಎಂದು ಕನ್ನಡ ನುಡಿ ಪರಿಚಾರಕ ಕಡೂರು ಸೂರಿ ಶ್ರೀನಿವಾಸ್ ಹೇಳಿದರು.
ಕೊಟ್ಟಿಗೆಹಾರದ ನಿಸರ್ಗ ಗ್ರ್ಯಾಂಡ್ ಹೊಟೇಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ಭಾಷೆ, ನಾಡು ನುಡಿಯನ್ನು ನೆಲ, ಜಲ, ಕಲೆ, ಸಾಹಿತ್ಯ ಸಂಸ್ಕøತಿಯ ರಕ್ಷಣೆ ಹಿನ್ನಲೆಯಲ್ಲಿ ಸೇವೆ ನೀಡಲು ಪೂರ್ಣ ಪ್ರಮಾಣದ ಶ್ರಮವಹಿಸಲಾಗುವುದು. ಈ ಹಿಂದೆಯೂ ಕನ್ನಡ ಸಾಹಿತ್ಯ ಪರಿಷತ್ ಪರಿಷತ್ನಲ್ಲಿ ತೊಡಗಿಸಿಕೊಂಡು ಕಡೂರು ತಾಲ್ಲೂಕಿನಲ್ಲಿ ಕಸಾಪ ಅಧ್ಯಕ್ಷನಾಗಿ, ಕಾರ್ಯದರ್ಶಿಯಾಗಿ, ಜಿಲ್ಲಾ ಸಂಚಾಲಕನಾಗಿ ,ಅಲ್ಲದೇ ಮೈಸೂರು ವಿಭಾಗದ ಸಂಚಾಲಕನಾಗಿಯೂ ಸೇವೆ ನೀಡಿದ ಅನನ್ಯ ಅನುಭವ ಪಡೆದಿದ್ದೇನೆ. ಈ ಹಿಂದೆ ಗಡಿ ವಿಷಯ ಬಂದಾಗಲೂ ನನ್ನ ಹೋರಾಟದ ಪರಿಕಲ್ಪನೆ ನಿರಂತರವಾಗಿ ನಡೆದಿದೆ. ಕನ್ನಡ ಪುಸ್ತಕ ಪ್ರಾಧಿಕಾರಗಳು, ಅಭಿವೃದ್ದಿ ಪ್ರಾಧಿಕಾರಗಳು, ಕನ್ನಡ ಸಾಹಿತ್ಯ ಪರಿಷತ್ತಿನ ನಿಯಮ ನಿಬಂಧನೆಗಳಿಗೆ ಒಳಪಟ್ಟು ಜಿಲ್ಲಾ ಹಾಗೂ ತಾಲ್ಲೂಕು ಸಾಹಿತ್ಯ ಸಮ್ಮೇಳನಗಳು, ಕಥಾ ಕಮ್ಮಟ, ಕಾವ್ಯಕಮ್ಮಟಗಳನ್ನು ಆಯೋಜನೆ ಮಾಡಿಕೊಂಡು ಬಂದಿದ್ದೇನೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯು ಸದ್ಯದಲ್ಲೇ ನಡೆಯಲಿದ್ದು, ಅದರ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಮತದಾರರು ಬೆಂಬಲ, ಪ್ರೋತ್ಸಾಹ ನೀಡಿ ಚುನಾಯಿಸಿದ ಪಕ್ಷದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವತೋಮುಖ ಅಭಿವೃದ್ದಿಗಾಗಿ ತಮ್ಮನ್ನು ತೊಡಗಿಸಿ ನಾಡು ನುಡಿಯ ರಕ್ಷಣೆಗಾಗಿ ಶ್ರಮಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಬಣಕಲ್ ಹೋಬಳಿ ಅಧ್ಯಕ್ಷ ವಸಂತ್ ಹಾರ್ಗೋಡು, ತಾಲ್ಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಕ್ಕಿ ಮಂಜುನಾಥ್ ಇದ್ದರು.
Home ಸ್ಥಳಿಯ ಸುದ್ದಿ ಪ್ರತಿ ಗ್ರಾಮ ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕ ರಚಿಸಲು ಪ್ರಯತ್ನ: ಸೂರಿ ಶ್ರೀನಿವಾಸ್ ಭರವಸೆ…










