ಪ್ರೇಯಸಿಯನ್ನು ಹಿಂದೆ ಕೂರಿಸಿಕೊಂಡು ಸ್ಕೂಟಿ ವೀಲಿಂಗ್ ಮಾಡಿದ್ದ ಯುವಕನನ್ನು ಬಂಧಿಸಿದ ಪೊಲೀಸರು…

190
firstsuddi

ಬೆಂಗಳೂರು : ಪ್ರೇಯಸಿಯನ್ನು ಹಿಂದೆ ಕೂರಿಸಿಕೊಂಡು ಸ್ಕೂಟಿ ವೀಲಿಂಗ್ ಮಾಡಿದ್ದ ಯುವಕನನ್ನು ಹೆಬ್ಬಾಳ ಟ್ರಾಫಿಕ್ ಪೊಲೀಸರು ಬಂಧಿಸಿದ್ದಾರೆ. ನೂರ್ ಅಹಮದ್ ಬಂಧಿತ ಯುವಕ. ಯುವಕ ವೀಲಿಂಗ್ ಮಾಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಹೆಬ್ಬಾಳ ಟ್ರಾಫಿಕ್ ಪೊಲೀಸರು ಯುವಕನನ್ನು ಬಂಧಿಸಿ ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.