ಫೈರ್ ಕಟ್ಟಿಂಗ್ ಮಾಡಿಸಿಕೊಳ್ಳಲು ಹೋಗಿ ಆಸ್ಪತ್ರೆ ಸೇರಿದ ಯುವಕ.

61
firstsuddi

ಗಾಂಧಿನಗರ : ಫೈರ್ ಹೇರ್ ಕಟ್ಟಿಂಗ್ ಮಾಡಿಸಿಕೊಳ್ಳಲು ಹೋಗಿ 18 ವರ್ಷದ ಯುವಕನೋರ್ವ ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿರುವ ಘಟನೆ ಗುಜರಾತಿನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದಲ್ಲಿ ನಡೆದಿದೆ.

ಆರಿಫ್ ಶಾ ಎಂಬ ಯುವಕ ನಿನ್ನೆ ಬಾಂಟಿ ಸಲೂನ್ ನಲ್ಲಿ ವಿಚಿತ್ರ ರೀತಿಯ ಫೈರ್ ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಿದ್ದ. ತಲೆಗೆ ರಾಸಾಯನಿಕಗಳನ್ನು ಸಿಂಪಡಿಸಿದ ಕ್ಷೌರಿಕ, ತಲೆಗೆ ಬೆಂಕಿ ಹಚ್ಚಿದ್ದಾನೆ. ಆದರೆ ಏಕಾಏಕಿ ಹೊತ್ತಿಕೊಂಡ ಬೆಂಕಿ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ವ್ಯಾಪಿಸಿದ್ದು, ಸುಟ್ಟ ಗಾಯಗಳಾಗಿವೆ. ತಕ್ಷಣ ಯುವಕನನ್ನು ವಲ್ಸಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚುವರಿ ಚಿಕಿತ್ಸೆಗಾಗಿ ಅಲ್ಲಿಂದ ಅವರನ್ನು ಸೂರತ್ ನ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬೆಂಕಿ ಕ್ಷೌರಕ್ಕೆ ಯಾವ ರಾಸಾಯನಿಕ ಬಳಸಲಾಗಿದೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದಾರೆ.

ಬೆಂಕಿ ಕಟ್ಟಿಂಗ್ ಎಂದರೆ, ಕ್ಷೌರಿಕ ಅಥವಾ ಕೇಶ ವಿನ್ಯಾಸಕರು ಗ್ರಾಹಕನ ತಲೆಕೂದಲಿನ ಮೇಲೆ ಬೆಂಕಿಯನ್ನು ಬಳಸಿ ಅದನ್ನು ಒಂದು ಶೈಲಿಗೆ ಹೊಂದಿಸುವ ಪ್ರಕ್ರಿಯೆಯಾಗಿದೆ.