ಬಜೆಟ್ ಅಧಿವೇಶನ – ಮೊದಲೆರಡು ದಿನ ಪ್ರಶ್ನೋತ್ತರ, ಶೂನ್ಯ ಅವಧಿ ಇರುವುದಿಲ್ಲ…

62
firstsuddi

ನವದೆಹಲಿ : ಜನವರಿ 31 ರಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಲೋಕಸಭೆ ಹಾಗೂ ರಾಜ್ಯಸಭೆ ಅಧಿವೇಶನದ ಎರಡೂ ಕಲಾಪಗಳಲ್ಲಿ ಮೊದಲ ಎರಡು ದಿನ ಪ್ರಶ್ನೋತ್ತರ ಹಾಗೂ ಶೂನ್ಯ ವೇಳೆ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಮೊದಲ ದಿನ ರಾಷ್ಟ್ರಪತಿಗಳು ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಕಲಾಪ ಆರಂಭವಾಗಲಿದೆ. ಫೆ.1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ 17ನೇ ಲೋಕಸಭೆಯ 8ನೇ ಅಧಿವೇಶನದ ಮೊದಲ ಎರಡು ದಿನ ಶೂನ್ಯ ವೇಳೆ ಹಾಗೂ ಪ್ರಶ್ನೋತ್ತರ ಇರುವುದಿಲ್ಲ.

ಒಂದು ವೇಳೆ ಸದಸ್ಯರಿಂದ ಸಾರ್ವಜನಿಕ ತುರ್ತು ಪ್ರಶ್ನೆಗಳು ಇದ್ದಲ್ಲಿ ಅವುಗಳನ್ನು ಫೆ.2 ರಂದು ನಡೆಯಲಿರುವ ಕಲಾಪಕ್ಕೆ ಪರಿಗಣಿಸಲಾಗುತ್ತದೆ. ಈ ಸಂಬಂಧ ಫೆ.1 ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯೊಳಗೆ ಆನ್ಲೈನ್ ಇ – ಪೋರ್ಟಲ್ ಅಥವಾ ನೇರವಾಗಿ ಸಂಸತ್ ನೋಟಿಸ್ ಕಚೇರಿಗೆ ತಿಳಿಸಬೇಕೆಂದು ಸೂಚಿಸಲಾಗಿದೆ.