ಬಡತನದಲ್ಲೂ ಸಾಧನೆ : ದ್ವಿತೀಯ ಪಿಯುಸಿಯಲ್ಲಿ ಶೇ.85 ಅಂಕ ಗಳಿಸಿದ ವಿದ್ಯಾರ್ಥಿನಿ.

90
firstsuddi

ಚಿಕ್ಕಮಗಳೂರು : ಅತ್ಯಂತ ಹಿಂದುಳಿದ ವರ್ಗದಿಂದ ಬಂದ ವಿದ್ಯಾರ್ಥಿನಿಯೋರ್ವಳು ಕಡುಬಡತನದ ಬೇಗೆಯ ನಡುವೆಯೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85.16 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಗಮನ ಸೆಳೆದಿದ್ದಾಳೆ.

ಶ್ರದ್ದೆ ಮತ್ತು ಪರಿಶ್ರಮದಿಂದ ಸಾಧನೆ ಮಾಡಿ ವಿದ್ಯೆಗೆ ಜಾತಿಯ ಸೋಂಕಿಲ್ಲ ಎಂಬುದನ್ನು ಸಾಬೀತು ಪಡಿಸಿರುವ ವಿದ್ಯಾರ್ಥಿನಿ ಸಿ.ಎಸ್.ಗಾನವಿ ನಗರದ ಹೆರಿಗೆ ಆಸ್ಪತ್ರೆ ರಸ್ತೆಯಲ್ಲಿರುವ ವಂದನಾ ಮೆನ್ಸ್ ಪಾರ್ಲರ್ ನ ಮಾಲೀಕ ಸವಿತಾ ಸಮಾಜದ ಜೆ.ಸತ್ಯನಾರಾಯಣ ಹಾಗೂ ಕೆ.ತುಳಸಿ ಅವರ ಪುತ್ರಿ.

ನಗರದ ಬಿಜಿಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಸಿ.ಎಸ್.ಗಾನವಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 511 ಅಂಕಗಳನ್ನು ಗಳಿಸಿದ್ದಾಳೆ.