ಬಸ್ ಹಾಗೂ ಬೈಕಿನ ನಡುವೆ ಮುಖಾಮುಖಿ ಡಿಕ್ಕಿ- ಓರ್ವ ಸ್ಥಳದಲ್ಲೇ ಸಾವು…

188
First Suddi

ಮೈಸೂರು : ಖಾಸಗಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಆಗಿರುವ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಬನ್ನಹಳ್ಳಿ ಹುಂಡಿ ಗ್ರಾಮದ ಬಳಿ ನಡೆದಿದೆ.
ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಬೈಕ್ ಸವಾರ ದಿನೇಶ್ (23) ಸಾವನ್ನಪ್ಪಿದ್ದಾರೆ. ಮೃತ ದಿನೇಶ್ ನಂಜನಗೂಡಿನ ಹದಿನಾರು ಗ್ರಾಮದ ನಿವಾಸಿಯೆಂದು ಗುರುತಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಟಿ.ನರಸೀಪುರ ಠಾಣೆ ಪೊಲೀಸರು ಘಟನೆ ಕುರಿತು ಹೆಚ್ಚಿನ ವಿವರವನ್ನು ಪಡೆಯುತ್ತಿದ್ದಾರೆ.