ಬಸ್, 2 ಕಾರುಗಳ ನಡುವೆ ಅಪಘಾತ – ಮೂವರು ದುರ್ಮರಣ…

49
firstsuddi

ವಿಜಯಪುರ : ಕೆಎಸ್​ಆರ್​ಟಿಸಿ ಬಸ್ ಹಾಗೂ ಎರಡು ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 218 ರ ಕುಪ್ಪಕಡ್ಡಿ ಕ್ರಾಸ್ ಬಳಿ ನಿನ್ನೆ ಸಂಜೆ ಸಂಭವಿಸಿದೆ.

ಗುಲ್ಬರ್ಗಾ ಜಿಲ್ಲೆಯ ಸುನಂದಾ ಮಲ್ಲಿಕಾರ್ಜುನ ಕಲಶೆಟ್ಟಿ (25), ಸುಮನ್ (3 ತಿಂಗಳು) ಮಗು ಹಾಗೂ ಶರಣಮ್ಮ ಬಸವರಾಜ್ ಕಲಶೆಟ್ಟಿ (55) ಮೃತ ದುರ್ದೈವಿಗಳು. ಅಪಘಾತದಲ್ಲಿ ಇದೇ ಕುಟುಂಬದ ಉಮೇಶ ಕಲಶೆಟ್ಟಿ ಮತ್ತು ಅವರ ಪತ್ನಿ ಸುರೇಖಾ ಕಲಶೆಟ್ಟಿ, ಮಕ್ಕಳಾದ 8 ತಿಂಗಳ ಸುಹಾನ್ ಹಾಗೂ 2 ವರ್ಷದ ಸಾನ್ವಿ ಗಂಭೀರ ಗಾಯಗೊಂಡಿದ್ದು ಅವರನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದು ಕಾರು ವಿಜಯಪುರದ ಮೂಲದ್ದಾಗಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಾಗಲಕೋಟೆಯಿಂದ ವಿಜಯಪುರಕ್ಕೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಗೆ ಎದುರಿಗೆ ಗುಲ್ಬರ್ಗಾದಿಂದ ಬರುತ್ತಿದ್ದ ಕುಲಶೆಟ್ಟಿ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ವಿಜಯಪುರ ಮೂಲದ ಕಾರೊಂದನ್ನು ಓವರ್ ಟೆಕ್ ಮಾಡಲು ಹೋಗಿ ಎರಡು ಕಾರುಗಳು ಬಸ್ ಗೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.