ಬಾಯ್‍ಫ್ರೆಂಡ್‍ ಗಾಗಿ ಆತನ ಮಗನನ್ನೇ ಕೊಂದು ಮಂಚದಡಿಯಲ್ಲಿ ಬಚ್ಚಿಟ್ಟ ಖತರ್ನಾಕ್ ಲೇಡಿ…

53
firstsuddi

ನವದೆಹಲಿ: ಬಾಯ್‍ಫ್ರೆಂಡ್‍ ಗಾಗಿ ಆತನ ಮಗನನ್ನೇ ಕೊಂದು ಮಂಚದಡಿಯಲ್ಲಿ ಬಚ್ಚಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತಳನ್ನು ಪೂಜಾ ಎಂದು ಗುರುತಿಸಲಾಗಿದೆ. ಈಕೆ ಮಲಗಿದ್ದ ಅಪ್ರಾಪ್ತನನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ನಂತರ ಮಂಚದ ಕೆಳಗಡೆ ಇರುವ ಬಾಕ್ಸ್ ನಲ್ಲಿ ಶವವಿಟ್ಟು ಅಲ್ಲಿಂದ ಪರಾರಿಯಾಗಿದ್ದಾಳೆ.

ಪೂಜಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂಜಾ ಮೃತ ಬಾಲಕನ ತಂದೆ ಜಿತೇಂದರ್ ಜೊತೆ ಲಿವ್-ಇನ್-ರಿಲೇಶನ್‍ಶಿಪ್‍ನಲ್ಲಿದ್ದಳು. ಇಬ್ಬರೂ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಜಿತೇಂದರ್ ಗೆ 11 ವರ್ಷದ ಮಗನಿರುವ ಕಾರಣ ಆತ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಲು ನಿರಾಕರಿಸಿದನು. ಅಲ್ಲದೇ ಆತ ಪೂಜಾಳ ಮನೆಯಿಂದ ಹೊರಟು ಹೋಗಿ ಮೊದಲ ಪತ್ನಿಯ ಜೊತೆಯೇ ವಾಸಿಸಲು ಶುರು ಮಾಡಿದ್ದ. ಇದು ಪೂಜಾಳನ್ನು ಮತ್ತಷ್ಟು ಕೆರಳುವಂತೆ ಮಾಡಿತ್ತು.

ಅಂತೆಯೇ ಬಾಲಕ ಮಲಗಿದ್ದ ಸಂದರ್ಭದಲ್ಲಿ ಆತನನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಪರಾರಿಯಾಗಿದ್ದಾಳೆ. ಇದೀಗ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.