ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣ – ಅನಧಿಕೃತ ಟ್ಯೂಷನ್ ಕೆಂದ್ರಗಳಿಗೆ ಡಿಡಿಪಿಐ ಖಡಕ್ ವಾರ್ನಿಂಗ್…

68
firstsuddi

ಮಂಡ್ಯ : ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಗೆ ಹೋದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ ಜರುಗಿದ ಬೆನ್ನಲ್ಲೆ ಎಚ್ಚೆತ್ತ ಶಿಕ್ಷಣ ಇಲಾಖೆ ಅನಧಿಕೃತ ಟ್ಯೂಷನ್ ಸೆಂಟರ್ ಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಅನುಮತಿ ಪಡೆಯದೆ ಟ್ಯೂಷನ್ ಸೆಂಟರ್ ಗಳನ್ನು ನಡೆಸಿದರೆ ಕೇಸ್ ಗಳನ್ನು ದಾಖಲು ಮಾಡುವುದಾಗಿ ಡಿಡಿಪಿಐ ಜವರೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಸಂಸ್ಥೆಯ ಮೇಲ್ವಿಚಾರಕನಿಂದಲೇ ಪೈಶಾಚಿಕ ಕೃತ್ಯ ನಡೆದಿತ್ತು. ಇದೀಗ ಘಟನೆ ಬಳಿಕ ಜಿಲ್ಲೆಯಾದ್ಯಂತ ಅಕ್ರಮ ಟ್ಯೂಷನ್ ಸೆಂಟರ್ ಪತ್ತೆಗೆ ಸುತ್ತೋಲೆ ಹೊರಡಿಸಿರುವ ಡಿಡಿಪಿಐ, ಅನಧಿಕೃತ ಟ್ಯೂಷನ್ ಕಂಡು ಬಂದರೆ ತಕ್ಷಣವೇ ಕ್ರಮ ವಹಿಸುವುದರ ಜೊತೆಗೆ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಿಕ್ಷಕರು ಟ್ಯೂಷನ್ ಮಾಡಿದ್ರೆ ಶಿಸ್ತುಕ್ರಮ ವಹಿಸಲಾಗುವುದು ಎಂದು ಜವರೇಗೌಡ ಶಿಕ್ಷಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಶಿಕ್ಷಣ ಇಲಾಖೆ ಎಚ್ಚರಿಕೆಯ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದರು.