ಬಿಜೆಪಿಯವರದ್ದು ಸುಳ್ಳಿನ ಯುನಿವರ್ಸಿಟಿ : ಡಿ.ಕೆ ಶಿವಕುಮಾರ್.

58
firstsuddi

ಹುಬ್ಬಳ್ಳಿ: ಬಿಜೆಪಿಯವರದ್ದು ಸುಳ್ಳಿನ ಯುನಿವರ್ಸಿಟಿ. ಸುಮಲತಾ ಕೂಡ ಬಿಜೆಪಿ ಅಸೋಸಿಯೇಟ್ ಮೆಂಬರ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವ್ಯಂಗ್ಯವಾಡಿದರು.

ನಗರದ ವಿಮಾನ ನಿಲ್ದಾಣದ ಮಾತನಾಡಿದ ಅವರು, ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳು. ಎಲ್ಲ ಪಕ್ಷದವರಿಗೂ ಒಳ್ಳೆದಾಗಲಿ, ಅಧಿಕಾರ ಮಾತ್ರ ನಮಗೆ ಸಿಗಲಿ ಎಂದರು. ಮೂರು ವರ್ಷದಿಂದ ಮಹದಾಯಿ ಯೋಜನೆ ಜಾರಿಗೊಳಿಸಲು ಆಗಿಲ್ಲ. ಮೂರು ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. ಯೋಜನೆ ಜಾರಿ ಮಾಡಲು ಆಗಿಲ್ಲ. ಈಗ ನಾವು ಮತ್ತು ರೈತರು ಸೇರಿ ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದೇವೆ. ಕಳಸಾ ಬಂಡೂರಿ ಯೋಜನೆ ರದ್ದುಗೊಳಿಸದಿದ್ದರೆ ಗೋವಾ ಸಚಿವರೊಬ್ಬರು ರಾಜೀನಾಮೆ ಕೊಡ್ತಾರಂತೆ. ಕೊಡಲಿ ಬಿಡಿ, ರಾಜ್ಯದಲ್ಲಿ 26 ಸಂಸದರು ಬಿಜೆಪಿಯವರಿದ್ದಾರೆ.

ಮಹದಾಯಿಗೆ ಇವರೆಲ್ಲ ಸೇರಿ ಪ್ರಧಾನಮಂತ್ರಿಗಳ ಬಳಿ ಒಮ್ಮೆಯೂ ಮಾತನಾಡಿಲ್ಲ. ನೀರು ಹರಿಸುವ ಮುನ್ನ ಕಾಮಗಾರಿಯಾದ್ರು ಪೂರ್ಣಗೊಳಿಸಬೇಕಿತ್ತು. ಪ್ರಹ್ಲಾದ್ ಜೋಶಿ ಎಷ್ಟೊಂದು ಅಪ್ಡೇಟ್ ಇದ್ದಾರೆ ಅನ್ನೋದು, ಪತ್ರ ಓದಲಿ ಗೊತ್ತಾಗುತ್ತೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಪತ್ರದಲ್ಲಿ ಕಂಡಿಷನ್ ಹಾಕಿದ್ದಾರೆ. ನಾವೆಲ್ಲ ಸತ್ತ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಬರುತ್ತಾ? ಕೊಡ್ರಿ ನಮಗೆ ಅಧಿಕಾರನಾ, ಆರು ತಿಂಗಳಲ್ಲಿ ಆ ಯೋಜನೆಯನ್ನು ಬಡಿದುಹಾಕ್ತೀನಿ ಎಂದು ಹೇಳಿದ್ದಾರೆ.

ಪಂಚಮಸಾಲಿ, ಒಕ್ಕಲಿಗ ಸಮುದಾಯಗಳ ಮೀಸಲಾತಿ ವಿಚಾರ ಕುರಿತು ಮಾತನಾಡಿ, ಸರ್ಕಾರ ಮೂಗಿಗಲ್ಲ, ತಲೆಗೆ ತುಪ್ಪ ಸವರಿದೆ. ಮೂಗಿಗೆ ಸವರಿದ್ದರೆ ಕನಿಷ್ಟಪಕ್ಷ ವಾಸನೆಯನ್ನಾದ್ರು ನೋಡಬಹುದಿತ್ತು. ಬೊಮ್ಮಾಯಿ ಸರ್ಕಾರ ತಲೆಗೆ ತುಪ್ಪ ಸವರಿದೆ. ಅದನ್ನು ಹೇಗೆ ತಿನ್ನೋದು? ಟಾಂಗ್ ನೀಡಿದ್ದಾರೆ.

ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ನೀಡಿದ ಮೀಸಲಾತಿಯಲ್ಲಿ ಸೇರಿಸುವುದಾಗಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಇದನ್ನು ಹೇಗೆ ಒಪ್ಪುತ್ತೆ? ಸಂಪುಟದ ತೀರ್ಮಾನ, ಅದೇಶದ ಬಳಿಕ ಯಾರಾದರೂ ಕೋರ್ಟಿಗೆ ಹೋದರೆ ಮುಗಿತು. ಮೀಸಲಾತಿ ಜಾರಿ ಆಗುವುದಿಲ್ಲ . ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ರೂ ಮುಂದೆ ಜಾರಿ ಆಗಿಲ್ಲ. ಕೇಂದ್ರಕ್ಕೆ ಕಳಿಸಿ ಸಂಸತ್ತಿನಲ್ಲಿ ಮಾಡಿಸಬೇಕಿತ್ತು. ಆದ್ರೆ ಕೇಂದ್ರಕ್ಕೆ ಕಳಿಸಲೇ ಇಲ್ಲ. ಇನ್ನು 90 ದಿನದಲ್ಲಿ ಸರ್ಕಾರವೇ ಇರಲ್ಲ. ಇವರ ಕೈಯಲ್ಲಿ ಅಧಿಕಾರನೇ ಇರುವುದಿಲ್ಲ, ಇನ್ನೂ ಮೀಸಲಾತಿ ಹೇಗೆ ಜಾರಿ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ, ಪೈಪೋಟಿಯಿದೆ ಎಂದು ಡಿ.ಕೆ.ಶಿವಕುಮಾರ್​ ಹೇಳಿಕೆ ನೀಡಿದರು. ನನ್ನ ಅಧ್ಯಕ್ಷತೆಯಲ್ಲಿ ಮ್ಯಾಚ್ ಫಿಕ್ಸಿಂಗ್​​​ಗೆ ಅವಕಾಶ ಇಲ್ಲ. ಮ್ಯಾಚ್​​ ಫಿಕ್ಸಿಂಗ್​ ಎಲ್ಲವೂ ಬೇರೆ ಪಕ್ಷದಲ್ಲಿ, ನಮ್ಮಲ್ಲಿಲ್ಲ. ಕಾಂಗ್ರೆಸ್​​ ಟಿಕೆಟ್​​ಗಾಗಿ ಬಹಳ ಜನರು ಅರ್ಜಿ ಹಾಕಿದ್ದಾರೆ. ವರದಿ ಬಂದ ಬಳಿಕ ಈ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ. ಬಿಜೆಪಿಯಲ್ಲಿ ಅಧಿಕಾರ ಇದೆ ಕಿತ್ತಾಡ್ತಿದ್ದಾರೆ, ನಮಗೆ ಅಧಿಕಾರ ಇಲ್ಲ. ಅಧಿಕಾರ ಸಿಗಲಿ ಎಂದು ಕಿತ್ತಾಡುತ್ತಿದ್ದಾರೆ ಎಂದರು.