ಬಿಜೆಪಿಯಿಂದ ಸ್ಥಿರ ಸರ್ಕಾರ ಅಸಾಧ್ಯ : ಹೆಚ್.ಡಿ. ಕುಮಾರಸ್ವಾಮಿ.

425
firstsuddi

ಬೆಂಗಳೂರು : ಉಸ್ತುವಾರಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಲಕ್ಕಸಂದ್ರದಲ್ಲಿರುವ ಶಾಸಕ ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಸುಮಾರು 2ಗಂಟೆಗಳ ಕಾಲ ರಾಮಲಿಂಗಾರೆಡ್ಡಿ ಅವರ ಜೊತೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಸ್ತುವಾರಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಯಾರಿಂದಲೂ ಸಧ್ಯದ ಸ್ಥಿತಿಯಲ್ಲಿ ಸುಭದ್ರ ಸರ್ಕಾರ ಕೊಡಲು ಸಾಧ್ಯವಿಲ್ಲ. ಬಿಜೆಪಿಯಿಂದ ಸ್ಥಿರ ಸರ್ಕಾರ ಅಸಾಧ್ಯ. ರಾಮಲಿಂಗಾ ರೆಡ್ಡಿ ಅವರು ಕೂಡಾ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ನಾವು ರಾಜೀನಾಮೆ ವಾಪಸ್ ಪಡೆಯುವಂತೆ ಮನವಿ ಮಾಡಿದ್ದೆವು. ಅವರು ನಮ್ಮ ಮಾತಿಗೆ ಬೆಲೆ ಕೊಟ್ಟು ಮತದಾನಕ್ಕೂ ಹಾಜರಾಗಿದ್ದರು. ಅವರ ಕುರಿತು ನಾನು ವಿಧಾನಸಭೆಯಲ್ಲೇ ಮಾತನಾಡಬೇಕಿತ್ತು, ಆದರೆ ಮಾತನಾಡಲು ಸಾಧ್ಯ ಆಗದೇ ಇದ್ದ ಕಾರಣ ಮಾತನಾಡಿಲ್ಲ ಎಂದು ಹೇಳಿದ್ದಾರೆ.