ಬೆಂಗಳೂರು : ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಳೆದ ವಾರ ಬಿಡುಗಡೆ ಮಾಡಿದ್ದ ಬಿಜೆಪಿ ಇದೀಗ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿದೆ. ಈ ಹಿಂದಿನ 2 ಪಟ್ಟಿಗಳಲ್ಲಿ 212 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು. ಇದೀಗ 10 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.
ಯಾರಿಗೆಲ್ಲಾ ಟಿಕೆಟ್?
ನಾಗಠಾಣ – ಸಂಜೀವ್ ಐಹೊಳೆ
ಸೇಡಂ – ರಾಜಕುಮಾರ್ ಪಾಟೀಲ್
ಕೊಪ್ಪಳ – ಮಂಜುಳಾ ಅಮರೇಶ್
ರೋಣ – ಕಳಕಪ್ಪ ಬಂಡಿ
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ – ಮಹೇಶ್ ಟೆಂಗಿನಕಾಯಿ
ಹಗರಿಬೊಮ್ಮನಹಳ್ಳಿ – ಬಿ.ರಾಮಣ್ಣ
ಹೆಬ್ಬಾಳ – ಕಟ್ಟಾ ಜಗದೀಶ್
ಗೋವಿಂದರಾಜನಗರ – ಉಮೇಶ್ ಶೆಟ್ಟಿ
ಮಹದೇವಪುರ – ಮಂಜುಳ ಅರವಿಂದ ಲಿಂಬಾವಳಿ
ಕೃಷ್ಣರಾಜ- ಶ್ರೀವತ್ಸ.










