ಬಿಸ್ಕೆಟ್, ಬೇಕರಿ ತಿಂಡಿ ಬಳಸಿ ತೆಯ್ಯಂ ಕಲಾಕೃತಿ ರಚಿಸಿದ ಕಲಾಕಾರ – ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ…

73
firstsuddi

ತಿರುವನಂತಪುರಂ : ಬಿಸ್ಕೆಟ್ ಹಾಗೂ ಬೇಕರಿ ಉತ್ಪನ್ನಗಳನ್ನು ಬಳಸಿಕೊಂಡು ಕೇರಳದ ಕಲಾ ಪ್ರಕಾರವಾದ ತೆಯ್ಯಂ ಕಲಾಕೃತಿಯನ್ನು ರಚಿಸಲಾಗಿದೆ.

ಕಲಾಕಾರ ಡಾವಿಂಚಿ ಸುರೇಶ್ ಈ ಕಾಲಕೃತಿಯನ್ನು ರಚಿಸಿದ್ದಾರೆ. ಸುಮಾರು 15 ಗಂಟೆಗಳ ಸಮಯ ತೆಗೆದುಕೊಂಡು 24 ಅಡಿ ಉದ್ದದ ತ್ಯೆಯಂ ಚಿತ್ರವನ್ನು ರಚಿಸಿದ್ದಾರೆ. ಕೇರಳದ ಕಣ್ಣೂರಿನ ಬೇಕರಿ ಅಂಗಡಿಯೊಂದರಲ್ಲಿ ತೆಯ್ಯಂ ಕಲಾಕೃತಿಯನ್ನು ರಚಿಸಿದ್ದು, ಕಲಾಕಾರನ ಕೈಚಳಕಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಕಲಾಕೃತಿಯನ್ನು ರಚಿಸಲು ನನ್ನ ಸ್ನೇಹಿತರು ನನಗೆ ಸಹಾಯ ಮಾಡಿದರು. ನಾವು 24 ಅಡಿ ಉತ್ತದ ಈ ಕಲಾಕೃತಿಗೆ 25,000 ಬಿಸ್ಕೆಟ್ ಬಳಕೆ ಮಾಡಲಾಗಿದೆ. ಹಲವು ಟೇಬಲ್ ಗಳನ್ನು ಜೋಡಿಸಿ ಅದರ ಮೇಲೆ ಬಿಳಿ ಬಣ್ಣದ ವಸ್ತ್ರವನ್ನಿಟ್ಟು, ಬಳಿಕ ವಿವಿಧ ಬಿಸ್ಕೆಟ್ ಮತ್ತು ಬೇಕರಿ ಉತ್ಪನ್ನಗಳನ್ನು ಈ ಕಲಾಕೃತಿ ರಚಿಸಲು ಬಳಸಲಾಗಿದೆ ಎಂದು ಕಲಾಕಾರ ಸುರೇಶ್ ಹೇಳಿದ್ದಾರೆ.

ಬೇಕರಿ ಬಾಣಸಿಗ ಮಹಮ್ಮದ್ ರಶೀದ್ ಬೇಕ್ ಸ್ಟೋರಿ ಬೇಕರಿ ಎಂಬ ಹೊಸ ಯೋಜನೆಯನ್ನು ಯೋಚಿಸಿ, ಈ ಚಿತ್ರವನ್ನು ರಚಿಸುವಂತೆ ಕಲಾಕಾರ ಸುರೇಶ್ ಬಳಿ ಕೇಳಿಕೊಂಡಿದ್ದೆ. ಬಳಿಕ ಎಲ್ಲರೂ ಸೇರಿ ಬೇಕರಿ ಅಂಗಡಿಯ ಹಾಲ್ ನಲ್ಲಿ ಟೇಬಲ್ ಮೇಲೆ ವಿಶಿಷ್ಟ ಕಲಾಕೃತಿಯನ್ನು ರಚಿಸಿದ್ದಾರೆ ಎಂದು ಮಹಮ್ಮದ್ ರಶೀದ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.