ಬಿಹಾರ : ಮಾಜಿ ಶಿಕ್ಷಣ ಸಚಿವ ಮೇವಲಾಲ್ ಚೌಧರಿ ಅವರು ಕೊರೊನಾಗೆ ಬಲಿ…

86
firstsuddi

ಬಿಹಾರ : ಮಾಜಿ ಶಿಕ್ಷಣ ಸಚಿವ ಹಾಗೂ ಜೆಡಿಯು ಶಾಸಕ ಮೇವಲಾಲ್ ಚೌಧರಿ ಅವರು ಕೊರೊನಾಗೆ ಬಲಿಯಾಗಿದ್ದಾರೆ..
ಕೊರೊನಾಗೆ ಒಳಗಾಗಿದ್ದ ಸಚಿವರು ಪ್ಯಾರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಾಲ್ಕು ಗಂಟೆಗೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಮೇವಲಾಲ್ ಚೌಧರಿ ಅವರು ತಾರಾಪುರ ಕ್ಷೇತ್ರದ ವಿಧಾನಸಭೆಯ ಸದಸ್ಯರಾಗಿದ್ದರು. ಆದರೆ ಭ್ರಷ್ಟಾಚಾರದ ಆರೋಪದಡಿ ಮೇವಲಾಲ್ ಚೌಧರಿ ಅವರನ್ನು ರಾಜ್ಯ ಶಿಕ್ಷಣ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿತ್ತು.