ಬುಲ್ಲಿ ಬಾಯ್ ಆ್ಯಪ್ ಪ್ರಕರಣ : ಬೆಂಗಳೂರು ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ವಶಕ್ಕೆ…

85
firstsuddi

ಮುಂಬೈ: ಬುಲ್ಲಿ ಬೈ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಮುಂಬೈ ಪೊಲೀಸರು ನಿನ್ನೆ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಇಲ್ಲಿಯವರೆಗೂ ವಶಕ್ಕೆ ಪಡೆದುಕೊಂಡಿರುವ ಶಂಕಿತ ವ್ಯಕ್ತಿಯ ವಯಸ್ಸನ್ನು ಹೊರತುಪಡಿಸಿ, ಆ ವ್ಯಕ್ತಿಯ ಯಾವ ಗುರುತನ್ನು ಬಹಿರಂಗಪಡಿಸಿಲ್ಲ. ಆರೋಪಿಯ ವಿರುದ್ಧ ಐಪಿಸಿ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವು ಶಂಕಿತರಿದ್ದು, ಅವರನ್ನೂ ಬಂಧಿಸುವ ಸಾಧ್ಯತೆ ಇದೆ.

ಬುಲ್ಲಿ ಬಾಯ್ ಇಂದೊಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಈ ಅಪ್ಲಿಕೇಷನ್ನಲ್ಲಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿ, ಅವರನ್ನು ಅಶ್ಲೀಲವಾಗಿ ಚಿತ್ರಿಸಿ ಹರಾಜು ಹಾಕಲಾಗುತ್ತಿತ್ತು. ಈ ಆ್ಯಪ್ ವಿರುದ್ಧ ಎಲ್ಲ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಕೇಂದ್ರ ಸರ್ಕಾರ ಆ್ಯಪ್ ಅನ್ನು ನಿಷೇಧಿಸಿತ್ತು.