ಬೈಕ್​​ಗೆ ಲಾರಿ ಡಿಕ್ಕಿ – ಯುವತಿ ಸ್ಥಳದಲ್ಲೇ ಸಾವು…

67
firstsuddi

ಬೆಂಗಳೂರು : ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಎಂ.ಜಿ.ರಸ್ತೆಯ ಗರುಡ ಮಾಲ್ ಬಳಿ ನಡೆದಿದೆ.

ಸಂಜನಾ ಪ್ರಿಯ(24) ಮೃತ ಯುವತಿ. ಇಂದು ಬೆಳ್ಳಗೆ ಎಂ.ಜಿ.ರಸ್ತೆಯ ಗರುಡ ಮಾಲ್ ಬಳಿ ಸಂಜನಾ ಪ್ರಿಯ ಹಾಗೂ ಆಕೆಯ ಸಹೋದರ ಬೈಕ್ ನಲ್ಲಿ ಬರುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆಕೆಯ ಸಹೋದರನಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಶೋಕನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.