ಮೂಡಿಗೆರೆ : ಇತ್ತೀಚೆಗೆ ಮೈಸೂರಿನ ಚಾಮುಂಡಿ ವಿಹಾರ್ ಇಂಡೋರ್ ಸ್ಟೇಡಿಯಂನಲ್ಲಿ ಸ್ಟೂಡೆಂಟ್ ಗೇಮ್ಸ್ ಫೆಡರೇಶನ್ ಆಯೋಜಿಸಿದ್ದ ಮೊದಲ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಗೆ ಮೂಡಿಗೆರೆ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಟ್ರೆಡಿಷನಲ್ ಮಾರ್ಷಲ್ ಆಟ್ಸ್(ರಿ) ಸಂಸ್ಥೆಯ ಕರಾಟೆ ಮುಖ್ಯ ಶಿಕ್ಷಕರಾದ ಸೆನ್‍ಸಾಯ್ ರಾಜೇಂದ್ರನ್ ಹಾಗೂ ಸೆನ್‍ಸಾಯ್ ಲತಾಚಂದ್ರುರವರಲ್ಲಿ ತರಬೇತಿ ಪಡೆದ ಮೂಡಿಗೆರೆಯ ಬೆತನಿ ಆಂಗ್ಲ ಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿ ಲಕ್ಷ್ ಪಾಟೀಲ್ ಇವರು ವಯಕ್ತಿಕ ಕಥಾ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಬಹುಮಾನ ಪಡೆದಿರುತ್ತಾರೆ. ಇವರು ಮೂಡಿಗೆರೆ ಜೆಎಂಎಫ್‍ಸಿ ನ್ಯಾಯಾಲಯದ ಸರ್ಕಾರಿ ವಕೀಲ ಸುನೀಲ್ ಪಾಟೀಲ್ ಇವರ ಪುತ್ರರಾಗಿರುತ್ತಾರೆ.