ಬೆಂಗಳೂರು : ಬಿಡಿಎ ಅಧಿಕಾರಿಗಳ ಜೊತೆ ಸೇರಿಕೊಂಡು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಿಡಿಎ ಮಧ್ಯವರ್ತಿಗಳು, ಏಜೆಂಟ್ ಗಳ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿದೆ. ಬೆಳ್ಳಂಬೆಳ್ಳಗ್ಗೆ ಎಸಿಬಿ ಎಸ್ ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು ಬೆಂಗಳೂರಿನ 9 ಕಡೆ ದಾಳಿ ಮಾಡಿದ್ದಾರೆ.
ರಘು ಬಿ ಎನ್ , ಚಾಮರಾಜಪೇಟೆ, ಮೋಹನ್ , ಮನೋರಾಯನ ಪಾಳ್ಯ, ಆರ್ ಟಿ ನಗರ, ಮನೋಜ್ , ದೊಮ್ಮಲೂರು, ಮುನಿರತ್ನ@ರತ್ನವೇಲು, ಕೆಂಗುಟೆ, ಮಲ್ಲತ್ತಹಳ್ಳಿ, ತೇಜು@ತೇಜಸ್ವಿ, ಆರ್ ಆರ್ ನಗರ, ಅಶ್ವಥ್ @ಮುದ್ದಿನಪಾಳ್ಯ ಅಶ್ವತ್ಥ, ಕೆಜಿ ಸರ್ಕಲ್ , ಮುದ್ದಿನಪಾಳ್ಯ, ರಾಮ, ಚಾಮುಂಡೇಶ್ವರಿನಗರ, ಬಿಡಿಎ ಲೇಔಟ್, ಲಕ್ಷ್ಮಣ್, ಚಾಮುಂಡೇಶ್ಚರಿ ನಗರ, ಬಿಡಿಎ ಲೇಔಟ್, ಚಿಕ್ಕ ಹನುಮಯ್ಯ, ಮುದ್ದಿನಪಾಳ್ಯ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಬಿಬಿಎಂಪಿ, ಬಿಡಿಎಗೆ ಸಂಬಂಧಿಸಿದ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸಿಕ್ಕ ದಾಖಲೆಗಳ ಅಧಾರದ ಮೇಲೆ ಮಧ್ಯವರ್ತಿಗಳ ಮನೆಗಳ ಮೇಲೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.










