ಬೇರೆಯವಳೊಂದಿಗೆ ಮಾತಾಡಿದ್ದಕ್ಕೆ ರೇಡಿಯಂ ಕಟರ್‌ನಿಂದ ಹಲ್ಲೆ – ಯುವತಿಯರಿಬ್ಬರ ನಡುವಿನ ಸಲಿಂಗಕಾಮವೇ ಹಲ್ಲೆಗೆ ಕಾರಣ!

39
firstsuddi

ದಾವಣಗೆರೆ : ರಸ್ತೆಯಲ್ಲೇ ಯುವತಿಯೊಬ್ಬಳಿಗೆ ಮತ್ತೋರ್ವ ಯುವತಿಯು ರೇಡಿಯಂ ಕಟರ್ ನಿಂದ ಹಲ್ಲೆ ನಡೆಸಿ ತಾನು ಕೈ ಕುಯ್ದುಕೊಂಡಿದ್ದ ಘಟನೆ ಇಲ್ಲಿನ ಶಾಂತಿನಗರದಲ್ಲಿ ನಿನ್ನೆ ಸಂಜೆ ನಡೆದಿತ್ತು. ಈ ಘಟನೆಯಿಂದ ಇಡೀ ಶಾಂತಿನಗರ ಬೆಚ್ಚಿಬಿದ್ದಿತ್ತು. ಇದೀಗ ಘಟನೆಗೆ ಕಾರಣ ಏನೆಂಬುದನ್ನು ಎಸ್ಪಿ ಸಿಬಿ ರಿಷ್ಯಂತ್ ಅವರು ಬಹಿರಂಗಪಡಿಸಿದ್ದಾರೆ. ಇಬ್ಬರು ಯುವತಿಯರ ನಡುವಿನ ಜಗಳಕ್ಕೆ ಸಲಿಂಗ ಕಾಮವೇ ಪ್ರಮುಖ ಕಾರಣವಾಗಿದೆ.

ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡ್ತಿರುವ ಲಾಸಿ ಹಾಗೂ ಸ್ನೇಹ ಇಬ್ಬರು ಯುವತಿಯರು ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿದ್ದರು. ಅಲ್ಲದೇ ಇತ್ತೀಚೆಗೆ ಇವರಿಬ್ಬರ ನಡುವೆ ಪ್ರೀತಿ ಚಿಗುರಿದ್ದು, ಇದು ಸಲಿಂಗಕಾಮಕ್ಕೆ ತಿರುಗಿದೆ. ಆದರೆ ಯುವತಿ ಸ್ನೇಹಳು ಪರ ಯುವತಿಯ ಜೊತೆ ಮಾತನಾಡಿ ಆತ್ಮೀಯವಾಗಿ ಇದ್ದಿದ್ದಕ್ಕೆ ಕೋಪಗೊಂಡ ಲಾಸಿ ನಿನ್ನೆ ಸ್ನೇಹಳಿಗೆ ರೇಡಿಯಂ ಕಟರ್ ನಿಂದ ಮನಬಂದಂತೆ ಕುತ್ತಿಗೆ, ಕೆನ್ನೆ ಹಾಗೂ ಕೈಗೆ ಗಂಭೀರ ಗಾಯಗೊಳಿಸಿದ್ದಾಳೆ. ಬಳಿಕ ತಾನು ಕೂಡ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾಸಿ ಹಾಗೂ ಸ್ನೇಹ ಇಬ್ಬರನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದರು. ಇಬ್ಬರು ಕೂಡ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸದ್ಯ ಲಾಸಿಯನ್ನು ಬಂಧಿಸಲಾಗಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 307 ಅಡಿ ಪ್ರಕರಣ ದಾಖಲಾಗಿದೆ.