ಮೂಡಿಗೆರೆ : ಬೈರಾಪುರದ ಸಂತ್ರಸ್ಥ ಜನರಿಗೆ ಕೊಂಚ ನೆರವಾದ ಮಾಧ್ಯಮ ತಂಡ, ಇದು ಪಸ್ಟ್ ಸುದ್ದಿ ಫಲಶ್ರುತಿ…

455
firstsuddi

ಮೂಡಿಗೆರೆ : ತಾಲ್ಲೂಕಿನ ಅತ್ಯಂತ ಪ್ರೇಕ್ಷಣಿಯ ಸ್ಥಳಗಳಲ್ಲೊಂದಾದ ಬೈರಾಪುರ ಗ್ರಾಮದ ಜನತೆಗೆ ಇತ್ತೀಚಿನ ದಿನಗಳಲ್ಲಿ ಸುರಿದ ಅಕಾಲಿಕ ಮಳೆಯ ಪ್ರಭಾವದಿಂದಾಗಿ ಅಲ್ಲಿನ ಜನರ ಬದುಕು ಅತಂತ್ರವಾಗಿ ವಿದ್ಯುತ್, ಸಾರಿಗೆ ಸಂಪರ್ಕ ಇನ್ನಿತರೇ ಮೂಲಭೂತ ಸೌಕರ್ಯದಿಂದ ವಂಚಿತರಾಗಿ ಬಹಳ ದಿನಗಳಿಂದ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದ ಜನರ ಈ ವಿಚಾರದ ಬಗ್ಗೆ ಮಾಹಿತಿ ಕಲೆಹಾಕಿ ಗ್ರಾಮಕ್ಕೆ ತೆರಳಿದ ಪಸ್ಟ್ ಸುದ್ದಿ ಮಾಧ್ಯಮ ಅಲ್ಲಿಯ ನೈಜ್ಯ ಪರಿಸ್ಥಿತಿಯ ಬಗ್ಗೆ ಖುದ್ದು ಮನಗಂಡು ದಿನಾಂಕ:21-08-19 ರಂದು ʼಮಳೆಗಾಲದಲ್ಲಿ ನಮಗೆ ದಿಕ್ಕು ದೆಸೆ ಯಾರು ಇಲ್ಲ ನಮ್ಮವರ ಕಷ್ಟ ಯಾರ ಕಿವಿಗೂ ಬೀಳುತ್ತಿಲ್ಲ, ಎಂಬಂತಹ ತಲೆಬರಹದಡಿ ಸವಿಸ್ಥಾರವಾದ ಪಾರದರ್ಶಕ ಸುದ್ದಿಯನ್ನು ಪ್ರಕಟಮಾಡಿತ್ತು.
ಈ ಸುದ್ದಿಯು ಪ್ರಕಟವಾದ ಬೆನ್ನಲ್ಲೆ ಇಲ್ಲಿನ ಜನರ ಕಷ್ಟಕ್ಕೆ ಸ್ವಲ್ಪಮಟ್ಟಿಗೆ ನೆರವಾಗಲು ಖಾಸಗಿ ದೃಶ್ಯಮಾಧ್ಯಮವಾದ ಟಿವಿ9 ಚಿಕ್ಕಮಗಳೂರು ವರದಿಗಾರ ಪ್ರಶಾಂತ್ ಅಲ್ಲಿನ ಜನರ ಬಳಿ ತೆರಳಿ ಪ್ರತಿ ಕುಟುಂಬಕ್ಕೆ ಅವರು ಉಪಯೋಗಿಸುವ ಅಗತ್ಯ ದಿನೋಪಯೋಗಿ ವಸ್ತುಗಳನ್ನು ವಿತರಿಸಿ ಅವರ ಕಷ್ಟಕ್ಕೆ ಸ್ಪಂದಿಸಿದ್ದು, ಇದರಿಂದ ಸುಮಾರು 10 ದಿನಗಳಿಂದಲೂ ಎಡಬಿಡದೆ ಸುರಿಯುತ್ತಿರುವ ಮಳೆಗೆ ಇಲ್ಲಿನ ಜನರ ಜನಜೀವನ ಹದಗೆಟ್ಟಿತ್ತು. ಇಂತಹ ಸಂದರ್ಭದಲ್ಲಿ ಗ್ರಾಮಕ್ಕೆ ತೆರಳಿ ಸಂತ್ರಸ್ಥರ ನೆರವಿಗೆ ನಿಂತ ಖಾಸಗಿ ಮಾಧ್ಯಮ ಅವರ ಕಷ್ಟಕ್ಕೆ ಕೊಂಚ ಸ್ಪಂದಿಸಿ ಸಂತ್ರಸ್ಥರಿಗೆ ನೆರವಾಗಿದೆ. ಇದು ಪಸ್ಟ್ ಸುದ್ದಿ ಇಂಪ್ಯಾಕ್ಟ್.