ಲಂಡನ್ : ಬ್ರಿಟನ್ ರಾಣಿ ಎಲಿಜಬೆತ್-|| ಅನಾರೋಗ್ಯದಿಂದ ನಿನ್ನೆ ರಾತ್ರಿ ಸ್ಕಾಟ್ಲೆಂಡ್ ಅರಮನೆಯಲ್ಲಿ ನಿಧನ ಹೊಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ಇಲ್ಲಿನ ಬಲ್ ಮೋರಾಲ್ ನಲ್ಲಿ ಅವರು ತೀವ್ರ ವೈದ್ಯಕೀಯ ನಿಗಾದಲ್ಲಿದ್ದರು. ಆದರೆ ಇದೀಗ ಅವರು ತಮ್ಮ 96ನೇ ವಯಸ್ಸಿನಲ್ಲಿ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಣಿ ಎಲಿಜಬೆತ್-|| ಸಾವಿಗೆ ಕಂಬನಿ ಮಿಡಿದಿದ್ದಾರೆ. ಬ್ರಿಟನ್ ನಲ್ಲಿ ಮುಂದಿನ 10 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
1953 ರಿಂದಲೂ ಬ್ರಿಟನ್ ರಾಣಿಯಾಗಿದ್ದು ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರಿಗೆ ನಾಲ್ವರು ಮಕ್ಕಳಿದ್ದಾರೆ. 8 ಮೊಮ್ಮಕ್ಕಳು ಮತ್ತು 12 ಮರಿ ಮಕ್ಕಳಿದ್ದಾರೆ.










