ಭಾರತಕ್ಕೆ ಕಾಲಿಟ್ಟ ರೂಪಾಂತರಿ ವೈರಸ್ – ಕರ್ನಾಟಕದಲ್ಲಿ ಎರಡು ಓಮಿಕ್ರಾನ್ ಪ್ರಕರಣ ಪತ್ತೆ!

67
firstsuddi

ನವದೆಹಲಿ : ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರಿ ಓಮಿಕ್ರಾನ್ ಇದೀಗ ಭಾರತಕ್ಕೆ ಕಾಲಿಟ್ಟಿದೆ.

ಕರ್ನಾಟಕದಲ್ಲಿ 66 ವರ್ಷದ ವೃದ್ಧ ಹಾಗೂ 46 ವರ್ಷದ ವ್ಯಕ್ತಿಯಲ್ಲಿ ಒಮಿಕ್ರೋನ್ ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.

ಎರಡು ಕೇಸ್ ಗಳು ಬೆಂಗಳೂರಿನಲ್ಲಿ ಕಂಡು ಬಂದಿವೆ. ಇವರಿಬ್ಬರು ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದರು. ರಾಜ್ಯ ಆರೋಗ್ಯ ಇಲಾಖೆ ಇವರ ಮೇಲೆ ನಿಗಾ ಇಟ್ಟಿತ್ತು. ಜೊತೆಗೆ ಪರೀಕ್ಷೆಗೊಳಪಡಿಸಲಾಗಿತ್ತು ಎಂದು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಮಾಹಿತಿ ನೀಡಿದ್ದಾರೆ.