ಭಾರತಕ್ಕೆ ರಷ್ಯಾದ ಸ್ಪುಟ್ನಿಕ್-ವಿ ಕೋವಿಡ್ ಲಸಿಕೆ ಆಗಮನ…

207
firstsuddi

ದೆಹಲಿ : ರಷ್ಯಾದ ಸ್ಪುಟ್ನಿಕ್-ವಿ ಕೋವಿಡ್ ಲಸಿಕೆಯ ಮೊದಲ ಬ್ಯಾಚ್ ಭಾರತಕ್ಕೆ ಇಂದು ಆಗಮನವಾಗಿದೆ. ಎರಡು ಲಕ್ಷ ಡೋಸ್ ಹೊತ್ತ ವಿಮಾನ ಇಂದು ಸಂಜೆ ಹೈದರಾಬಾದ್ ಏರ್ ಪೋರ್ಟ್ ಗೆ ತಲುಪಿದೆ. ದೇಶಾದ್ಯಂತ ಇಂದಿನಿಂದ ಮೂರನೇ ಹಂತದ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಇದರ ನಡುವೆ ರಷ್ಯಾದಲ್ಲಿ ತಯಾರಾದ ಸ್ಪುಟ್ನಿಕ್-ವಿ ಲಸಿಕೆ ಭಾರತಕ್ಕೆ ಬಂದಿದ್ದು, ಇದರ ಬಳಕೆಗೆ ಏಪ್ರಿಲ್ 12ರಂದೇ ಡಿಸಿಜಿಐ ಗ್ರೀನ್ ಸಿಗ್ನಲ್ ನೀಡಿದೆ.

ಇನ್ನೂ ದೇಶಿಯ ಲಸಿಕೆಗಳಾದ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಜತೆಗೆ ಸ್ಪುಟ್ನಿಕ್ ಕೂಡ ಕೊರೊನಾ ವಿರುದ್ಧ ಹೋರಾಡಲಿದ್ದು, ದೇಶದಲ್ಲಿ ಕೋವಿಡ್ ಸೋಂಕಿನ ವಿರುದ್ಧ ನೀಡಲಾಗುತ್ತಿರುವ 3ನೇ ಲಸಿಕೆ ಇದಾಗಿದೆ.

ಇದನ್ನ ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿ ಕಸೂಲಿಗೆ ಹಸ್ತಾಂತರ ಮಾಡಲಾಗುವುದು. ತದನಂತರ ಅನುಮೊದನೆ ಪಡೆದುಕೊಂಡು ಜನರಿಗೆ ಹಸ್ತಾಂತರ ಮಾಡುವ ಸಾಧ್ಯತೆ ಇದೆ.