ಹಾಸನ : ಭಾರತದಲ್ಲಿ ಇಲ್ಲಿಯವರೆಗೂ ಕಂಡು ಕೇಳರಿಯದ ಬಹುದೊಡ್ಡ ಅಘಾತ ಆಗುತ್ತದೆ ಎಂದು ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭಯಾನಕ ಭವಿಷ್ಯ ನುಡಿದಿದ್ದಾರೆ.
ಅಶಾಂತಿ, ಮತೀಯ ಗಲಭೆ, ದೊಂಬಿಗಳು, ಸಾವು, ಕೊಲೆ ನೋವುಗಳು ಹೆಚ್ಚಾಗಲಿವೆ. ವಿಶೇಷವಾಗಿ ಎಲೆಕ್ಟ್ರಿಕ್ನಿಂದ ಹೆಚ್ಚು ಅಪಾಯವಿದೆ. ಸುಂದರವಾದ ಹೆಣ್ಣುಮಕ್ಕಳ ಅಂಗಾಗಳನ್ನು ಕಿತ್ತು ತಿನ್ನುತಾರೆ. ರಾಜಕೀಯ ವಿಪ್ಲವವಾಗಿ, ಗುಂಪುಗಳಾಗುತ್ತವೆ. ಬೆಂಕಿ, ಗಾಳಿ, ಗುಡುಗು ಸಿಡಿಲಿನಿಂದ ವಿಪರೀತ ಅನಾಹುತಗಳಾಗುತ್ತವೆ. ಜಗತ್ತಿನ ಸಾಮ್ರಾಟರುಗಳು ತಲ್ಲಣಗೊಳ್ಳುತ್ತಾರೆ. ಸಾವು ನೋವುಗಳು ಹೆಚ್ಚಾಗುತ್ತವೆ ಎಂದಿದ್ದಾರೆ.
ಈ ವರ್ಷದ ಮಳೆ ಕೆಂಡಮಂಡಲ. ಈ ಬಾರಿ ಮುಂಗಾರು ಚೆನ್ನಾಗಿ ಆಗುತ್ತದೆ, ಹಿಂಗಾರು ಕಡಿಮೆಯಾಗಲಿದೆ. ಮಲೆನಾಡು ಬಯಲಾಗುತ್ತದೆ, ಬಯಲು ಮಲೆನಾಡಾಗುತ್ತದೆ. ನಿರೀಕ್ಷಿತ ಪ್ರದೇಶದಲ್ಲಿ ಮಳೆ ಸರಿಯಾಗಿ ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.










