ಭಾರತದಲ್ಲಿ ಮತ್ತೆ ಪಬ್‍ಜಿ ಹವಾ ಶುರು…? ಚೀನಾದ ಟೆನ್ಸೆಂಟ್ ಕಂಪನಿಯಿಂದ ದೂರವಾದ ದಕ್ಷಿಣ ಕೊರಿಯಾ ಸಂಸ್ಥೆ…

130
firstsuddi

ನವದೆಹಲಿ : ಭಾರತದಲ್ಲಿ ಪಬ್‍ಜಿ ನಿಷೇಧದ ಬಳಿಕ, ದಕ್ಷಿಣ ಕೊರಿಯಾದ ಕಂಪನಿಯ ಘಟಕ ಪ್ಲೇಯರ್ ಅನೌನ್ಸ್ ಬ್ಯಾಟಲ್ ಗ್ರೌಂಡ್ಸ್ ಭಾರತದಲ್ಲಿ ಪಬ್‍ಜಿ ಮೊಬೈಲ್ ಪ್ರಾಂಚೈಸಿಯನ್ನು ಚೀನಾದ ಟೆನ್ಸೆಂಟ್ ಗೇಮ್ಸ್ ಗೆ ನೀಡದಿರಲು ತೀರ್ಮಾನಿಸಿದೆ. ಬದಲಿಗೆ ಪಬ್‍ಜಿ ಕಾರ್ಪೋರೇಷನ್ ಈಗ ದೇಶದ ಎಲ್ಲಾ ಪಬ್ಲಿಶಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ.

ಈ ಕ್ರಮವು ಜನಪ್ರಿಯ ಆಟ ಭಾರತದಲ್ಲಿ ಪುನಾರಂಭಗೊಳ್ಳಲು ಸಹಾಯ ಮಾಡಲಿದೆ. ಇದು ಬಳಕೆದಾರರ ನೆಲೆಯಲ್ಲಿ ಅತಿ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಅಲ್ಲದೇ ಸರ್ಕಾರದ ಅಪ್ಲಿಕೇಷನ್ ನಿಷೇಧ ಉಪಕ್ರಮವು ಇಲ್ಲಿಯವರೆಗೆ ಚೀನಾದ ಕಂಪನಿಗಳನ್ನು ಮಾತ್ರ ಗುರಿಯಾಗಿರಿಸಿಕೊಂಡಿದೆ.

ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಬ್‍ಜಿ ಕಾರ್ಪೋರೇಷನ್ ಇನ್ನು ಮುಂದೆ ಚೀನಾದ ಟೆನ್ಸೆಂಟ್ ಗೇಮ್ಸ್ ಗೆ ಭಾರತದಲ್ಲಿ ಪ್ರಾಂಚೈಸಿಯನ್ನು ನೀಡದಿರಲು ತೀರ್ಮಾನಿಸಿದೆ. ಬದಲಿಗೆ ಪಬ್‍ಜಿ ಕಾರ್ಪೋರೇಷನ್ ದೇಶದೊಳಗಿನ ಎಲ್ಲಾ ಪಬ್ಲಿಷಿಂಗ್ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತದೆ. ಕಂಪನಿಯು ತನ್ನ ದಾರಿಯನ್ನು ಅನ್ವೇಷಿಸುತ್ತಿದ್ದಂತೆ ಮುಂದಿನ ದಿನಗಳಲ್ಲಿ ಭಾರತಕ್ಕೆ ಸ್ವಂತವಾದ ಪಬ್‍ಜಿ ಆಟದ ಅನುಭವ ಒದಗಿಸಲಿದೆ. ಸ್ಥಳೀಯ ಮತ್ತು ಆರೋಗ್ಯಕರ ಆಟದ ವಾತಾವರಣವನ್ನು ಉಳಿಸಿಕೊಳ್ಳುವ ಮೂಲಕ ಅದನ್ನು ರೂಪಿಸಲು ಕಂಪನಿ ಬದ್ಧವಾಗಿದೆ” ಎಂದು ಪಬ್‍ಜಿ ಕಾರ್ಪೋರೇಷನ್ ಹೇಳಿಕೆಯಲ್ಲಿ ವಿವರಿಸಿದೆ.

ಆಟಗಾರರ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯು ಕಂಪನಿಗೆ ಮೊದಲ ಆಧ್ಯತೆಯಾಗಿರುವುದರಿಂದ ಸರ್ಕಾರ ಕೈಗೊಂಡ ಕ್ರಮಗಳನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ ಹಾಗೂ ಗೌರವಿಸುತ್ತದೆ ಎಂದು ತಿಳಿಸಿದೆ. ಭಾರತೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಸರಿಸುವಾಗ ಗೇಮರ್‍ ಗಳಿಗಾಗಿ ಮತ್ತೊಮ್ಮೆ ವಾರ್ ಫೀಲ್ಡ್ ಗೆ ಇಳಿಯಲು ಅನುವು ಮಾಡಿಕೊಡುವ ಪರಿಹಾರವನ್ನು ಕಂಡುಹಿಡಿಯಲು ಭಾರತ ಸರ್ಕಾರದೊಂದಿಗೆ ಕೈಜೋಡಿಸಲು ನಾವು ಆಶಿಸುತ್ತೇವೆ ಎಂದು ಕಾರ್ಪೋರೇಷನ್ ತಿಳಿಸಿದೆ.

ಎರಡು ನೆರೆ ರಾಷ್ಟ್ರಗಳ ನಡುವೆ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವುದರಿಂದ ಸೆ. 2ರಂದು ಸೈಬರ್ ಸುರಕ್ಷತೆಯ ಬಗ್ಗೆ ಪಬ್‍ಜಿ ಮೊಬೈಲ್, ಪಬ್‍ಜಿ ಮೊಬೈಲ್ ಲೈಟ್ ಮತ್ತು ಇತರ 116 ಚೀನಾ ಮೂಲದ ಅಪ್ಲಿಕೇಷನ್‍ಗಳನ್ನು ನಿಷೇಧಿಸಿ ಭಾರತ ಸರ್ಕಾರ ಆದೇಶ ಹೊರಡಿಸಿತ್ತು.