ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಜೆಜೆ ಇರಾನಿ ವಿಧಿವಶ…

65
firstsuddi

ನವದೆಹಲಿ : ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಟಾಟಾ ಸ್ಟೀಲ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಮ್ಶೆಡ್ ಜೆ ಇರಾನಿ(86) ಅವರು ನಿನ್ನೆ ತಡರಾತ್ರಿ ಜೆಮ್ ಶೆಡ್ ಪುರದಲ್ಲಿ ನಿಧನರಾಗಿದ್ದಾರೆ ಎಂದು ಟಾಟಾ ಸ್ಟೀಲ್ ಕಂಪನಿ ತಿಳಿಸಿದೆ.

ಜಮ್ಶೆಡ್ ಜೆ ಇರಾನಿ ಅವರು 1936ರ ಜೂನ್ 2 ರಂದು ನಾಗ್ಪುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಶೆಡ್ ಇರಾನಿ ದಂಪತಿಗೆ ಜನಿಸಿದರು. ಇರಾನಿ ಅವರು 4 ದಶಕಗಳ ಕಾಲ ಟಾಟಾ ಸ್ಟೀಲ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. ಜೂನ್ 2011 ರಲ್ಲಿ ಟಾಟಾ ಸ್ಟೀಲ್ ಮಂಡಳಿಯಿಂದ ನಿವೃತ್ತರಾದರು. ಇವರು 43 ವರ್ಷಗಳ ಕಾಲ ಕಂಪನಿ ಅಭಿವೃದ್ಧಿಗಾಗಿ ಶ್ರಮಿಸಿದ್ದರು.

ಇರಾನಿ ಅವರು ಟಾಟಾ ಸ್ಟೀಲ್ ಮತ್ತು ಟಾಟಾ ಸನ್ಸ್ ಮಾತ್ರವಲ್ಲದೇ, ಟಾಟಾ ಮೋಟಾರ್ಸ್ ಮತ್ತು ಟಾಟಾ ಟೆಲಿಸರ್ವೀಸಸ್ ಸೇರಿದಂತೆ ಹಲವಾರು ಟಾಟಾ ಗ್ರೂಪ್ ಕಂಪನಿಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.