ಭಾರತದ ನೂತನ ಎಜಿ ಆಗಿ ವೆಂಕಟರಮಣಿ ನೇಮಕ.

53
firstsuddi

ನವದೆಹಲಿ : ಭಾರತದ ನೂತನ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಆರ್. ಆರ್.ವೆಂಕಟರಮಣಿಯವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ನಿನ್ನೆ ವೆಂಕಟರಮಣಿ ಎಜಿ ಆಗಿ ನೇಮಕವಾಗಿದ್ದು, ಅವರ ಅಧಿಕಾರಾವಧಿ ಮುಂದಿನ ಮೂರು ವರ್ಷಗಳವರೆಗೆ ಇರಲಿದೆ. ಹಾಲಿ ಎಜಿ ಕೆ.ಕೆ. ವೇಣುಗೋಪಾಲ್ ಅವರ ಅವಧಿಯು ನಾಳೆಗೆ(ಸೆ. 30) ಕೊನೆಗೊಳ್ಳಲಿದ್ದು, ಕೆ.ಕೆ. ವೇಣುಗೋಪಾಲ್ ಸ್ಥಾನಕ್ಕೆ ವೆಂಕಟರಮಣಿ ಅವರು ನೇಮಕಗೊಂಡಿದ್ದಾರೆ.

ಇತ್ತೀಚೆಗೆ ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಅಟಾರ್ನಿ ಜನರಲ್ ಆಗಿ ನೇಮಿಸಲು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿತ್ತು. ಆದರೆ ರೋಹಟಗಿ ಕೇಂದ್ರದ ಪ್ರಸ್ತಾಪವನ್ನು ತಿರಸ್ಕರಿಸಿದ ಬೆನ್ನಲ್ಲೇ ಆರ್ವೆಂ.ಕಟರಮಣಿ ಅವರಿಗೆ ಈ ಸ್ಥಾನ ಒಲಿದು ಬಂದಿದೆ.