ಭಾರತದ ಬಳಿಕ ಅಮೆರಿಕಾದಲ್ಲೂ ಚೀನಾ ಆ್ಯಪ್ ಬ್ಯಾನ್ ಮಾಡಲು ಚಿಂತನೆ…

157
firstsuddi

ವಾಷಿಂಗ್ಟನ್ : ಭಾರತ ವಿರುದ್ಧ ಗಾಲ್ವಾನ್ ಕಣಿವೆಯಲ್ಲಿ ಸಮರ ಸಾರಿದ್ದ ಚೀನಾಕ್ಕೆ ಭಾರತ ಚೀನಾದ 59 ಆ್ಯಪ್​ಗಳನ್ನು ಬ್ಯಾನ್ ಮಾಡುವ ಮೂಲಕ ಚೀನಾ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಅದರಂತೇ ಈಗಾ ಅಮೆರಿಕಾ ಕೂಡಾ ಟಿಕ್‍ಟಾಕ್ ಸೇರಿದಂತೆ ಚೀನಾದ ಕೆಲವು ಆ್ಯಪ್​ಗಳನ್ನು ಬ್ಯಾನ್ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಮಾತನಾಡಿದ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಅವರು ಅಮೆರಿಕಾ ವೀಡಿಯೋ ಶೇರಿಂಗ್ ಆಪ್ ಟಿಕ್‍ಟಾಕ್ ಸೇರಿದಂತೆ ಚೀನಾದ ಕೆಲವು ಆ್ಯಪ್​ಗಳನ್ನು ಬ್ಯಾನ್ ಮಾಡಲು ಚಿಂತನೆ ನಡೆಸುತ್ತಿದೆ. ಆದರೆ ಈ ಕುರಿತು ಅಂತಿಮ ತೀರ್ಮಾನವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಕಟಿಸುತ್ತಾರೆ. ಇದಕ್ಕಿಂತ ಹೆಚ್ಚಾಗಿ ನಾನೇನು ಹೇಳುವುದಿಲ್ಲ ಎಂದು ಹೇಳಿದ್ದಾರೆ.