ಭಾರತೀಯ ನೌಕಾದಳಕ್ಕೆ ಸೇರಿದ ಮಿಗ್ ಯುದ್ದ ವಿಮಾನ ಪತನ-ಪೈಲೆಟ್‍ಗಳು ಪ್ರಾಣಾಪಾಯದಿಂದ ಪಾರು…

246
firstsuddi

ಪಣಜಿ : ಭಾರತೀಯ ನೌಕಾದಳಕ್ಕೆ ಸೇರಿದ ಮಿಗ್ 29ಕೆ ತರಬೇತಿ ಯುದ್ದ ವಿಮಾನ ಇಂದು ಬೆಳಿಗ್ಗೆ ಗೋವಾದಲ್ಲಿ ಪತನಗೊಂಡಿದ್ದು, ಇಬ್ಬರು ಪೈಲಟ್‍ಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಎನ್‍ಎಸ್ ಹಂಸ ಯುದ್ಧ ನೌಕೆಗೆ ಸೇರಿದ ವಿಮಾನ ಇದಾಗಿದ್ದು, ಎಂದಿನಂತೆ ಇಂದು ಬೆಳಿಗ್ಗೆ ಕೂಡಾ ತರಬೇತಿ ನಡೆಸಲು ಮುಂದಾಗಿತ್ತು. ಈ ವೇಳೆ ವಿಮಾನ ಟೇಕ್ ಆಫ್ ಆದ ಕೆಲ ಹೊತ್ತಿನಲ್ಲೇ ಪತನಗೊಂಡಿದ್ದು, ಅದರಲ್ಲಿ ಇದ್ದ ಇಬ್ಬರು ಪೈಲೆಟ್‍ಗಳು ಪ್ಯಾರಚೂಟ್ ಮೂಲಕ ಸುರಕ್ಷಿತವಾಗಿ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.