ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಇನ್ನಿಂಗ್ಸ್ ಮತ್ತು 130 ರನ್‍ಗಳಿಂದ ಭರ್ಜರಿ ಜಯ…

236
firstsuddi

ಇಂದೋರ್ : ಬಾಂಗ್ಲಾದೇಶ ಮತ್ತು ಭಾರತ ತಂಡದ ನಡುವೆ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 130 ರನ್‍ಗಳಿಂದ ಜಯಗಳಿಸಿದೆ. ಇಂದೋರ್‍ನ ಹೋಳ್ಕರ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ 150 ರನ್‍ಗಳಿಗೆ ಆಲೌಟ್ ಆಗಿದ್ದು, ಭಾರತ 6 ವಿಕೆಟ್ ನೊಂದಿಗೆ 493ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. 343 ರನ್‍ಗಳ ಹಿನ್ನಡೆ ಸಾಧಿಸಿದ್ದ ಬಾಂಗ್ಲಾದೇಶ 2ನೇ ಇನ್ನಿಂಗ್ಸ್ ನಲ್ಲಿ 72 ರನ್‍ಗಳಿಗೆ 5ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶಕ್ಕೆ ಮುಂದೆ ಬಂದು ಬ್ಯಾಟ್ ಬೀಸಿದ್ದ ಲಿಟ್ಟನ್ ದಾಸ್, ಮುಷ್ಟಿಕರ್ ರಹೀಮ್ ಹಾಗೂ ಮೆಹ್ದಿ ಹಸನ್ ಅವರಿಂದ 213 ರನ್ ಗಳಿಸಲು ಸಾಧ್ಯವಾಯಿತು. ಭಾರತದ ಪರವಾಗಿ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಪಡೆದ ಶಮಿ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದರು. ಹಾಗೂ ಉಮೇಶ್ ಯಾದವ್ 2, ಆರ್. ಅಶ್ವಿನ್ 3 ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಪಡೆದುಕೊಂಡರು.