ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್‍ನಲ್ಲಿ ಹೊಸ ಸೌಲಭ್ಯ: ಹಣ ಇಲ್ಲದಿದ್ರೂ ಟಿಕೆಟ್ ಬುಕ್ ಮಾಡಬಹುದು.

40

ನವದೆಹಲಿ: ನೀವು ರೈಲಿನಲ್ಲಿ ಹೋಗಲು ಬಯಸುತ್ತಿದ್ದರೆ ಆದರೆ ತಕ್ಷಣವೇ ನಿಮ್ಮ ರೈಲು ಟಿಕೆಟ್‍ಗೆ ಪಾವತಿಸಲು ಸಾಧ್ಯವಾಗದಿದ್ದರೆ, ಚಿಂತಿಸಬೇಡಿ. ಭಾರತೀಯ ರೈಲ್ವೆ ಇಲಾಖೆಯು ಗ್ರಾಹಕರಿಗೆ ಟಿಕೆಟ್ ಬುಕಿಂಗ್‍ನಲ್ಲಿ ಹೊಸ ಸೌಲಭ್ಯ ಜಾರಿಗೆ ತಂದಿದೆ. ಒಂದು ವೇಳೆ ನೀವು ಪ್ರವಾಸಕ್ಕೆ ಪ್ಲ್ಯಾನ್ ಮಾಡುತ್ತಿದ್ದು, ತಕ್ಷಣವೇ ನಿಮ್ಮ ಬಳಿ ರೈಲು ಟಿಕೆಟ್ ಖರೀದಿಸಲು ಚಿಂತಿಸಬೇಕಿಲ್ಲ. ಅದಕ್ಕಾಗಿಯೇ ಐಆರ್‌ಸಿಟಿಸಿ ಈಗ ‘ಈಗಲೇ ಬುಕ್ ಮಾಡಿ, ನಂತರ ಪಾವತಿಸಿ’ ಆಯ್ಕೆಯನ್ನು ಪರಿಚಯಿಸಿದೆ, ಇದು ಪ್ರಯಾಣಿಕರಿಗೆ ಯಾವುದೇ ಮುಂಗಡ ಪಾವತಿಯಿಲ್ಲದೇ ಟಿಕೆಟ್ ಅನ್ನು ಸುರಕ್ಷಿತವಾಗಿರಿಸಲು ಅನುವು ಮಾಡಿಕೊಡುತ್ತದೆ. ಸಂಪೂರ್ಣ ಬುಕಿಂಗ್ ಪ್ರಕ್ರಿಯೆಯನ್ನು ಆನ್‍ಲೈನ್‍ನಲ್ಲಿ ಪೂರ್ಣಗೊಳಿಸಬೇಕು ಮತ್ತು ಅನುಸರಿಸಲು ಕೆಲವು ಪ್ರಮುಖ ಷರತ್ತುಗಳಿವೆ. ಹಾಗೂ ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಿದ 14 ದಿನಗಳಲ್ಲಿ ನೀವು ಪಾವತಿಯನ್ನು ಪೂರ್ಣಗೊಳಿಸಬೇಕು. ಒಂದು ವೇಳೆ 14 ದಿನಗಳಲ್ಲಿ ಹಣ ಪಾವತಿ ಮಾಡಲು ವಿಫಲವಾದ್ರೆ 3.5% ಸೇವಾ ಶುಲ್ಕ ವಿಧಿಸಲಾಗುತ್ತದೆ.