ಭಾರತೀಯ ಸೇನಾ ಪ್ಯಾರಾಚೂಟ್ ರೆಜಿಮೆಂಟ್‍ನಲ್ಲಿ ತರಭೇತಿ ಪಡೆಯಲಿರುವ ಎಂ.ಎಸ್. ಧೋನಿ…

313
firstsuddi

ನವದೆಹಲಿ : ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರು ಸದ್ಯ ವೆಸ್ಟ್ ಇಂಡೀಸ್ ಪಂದ್ಯದಿಂದ ದೂರ ಸರಿದಿದ್ದು, ಭಾರತೀಯ ಸೇನಾ ಪ್ಯಾರಾಚೂಟ್ ರೆಜಿಮೆಂಟ್‍ನಲ್ಲಿ ತರಭೇತಿ ಪಡೆಯಲಿದ್ದಾರೆ ಎನ್ನಲಾಗಿದೆ. ವಿಶ್ವಕಪ್ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಅವರು ನಿವೃತ್ತಿ ಪಡೆಯುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಧೋನಿ ಅವರು 2ತಿಂಗಳ ಕಾಲ ಕಾಶ್ಮೀರದಲ್ಲಿ ಭಾರತೀಯ ಸೇನಾ ಪ್ಯಾರಾಚೂಟ್ ರೆಜಿಮೆಂಟ್‍ನಲ್ಲಿ ತರಭೇತಿ ಪಡೆಯಲಿದ್ದಾರೆ. ಎಂ.ಎಸ್. ಧೋನಿ ಅವರು ಭಾರತೀಯ ಸೇನಾ ರೆಜಿಮೆಂಟ್‍ನಲ್ಲಿ ತರಭೇತಿ ಪಡೆಯುತ್ತೇನೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಸ್ವೀಕರಿಸಿದ ಬಿಪಿನ್ ರಾವತ್ ಅವರು ಎಂ.ಎಸ್. ಧೋನಿ ಅವರಿಗೆ ಕಾಶ್ಮೀರದ ಆರ್ಮಿ ಬೆಟಾಲಿಯನ್‍ನಲ್ಲಿ ತರಭೇತಿ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.