ಭಾರತೀಯ ಸೇನೆಯಿಂದ ತಕ್ಕ ಪ್ರತ್ಯುತ್ತರ : ಪಾಕ್ ನ 8 ಯೋಧರು ಬಲಿ…

122
firstsuddi

ಶ್ರೀನಗರ : ಗಡಿಯಲ್ಲಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ ಪಾಕಿಸ್ತಾನ ಸೇನೆಯ 8 ಸೈನಿಕರನ್ನು ಹೊಡೆದುರುಳಿಸಿದ್ದಾರೆ.
ಪಾಕಿಸ್ತಾನ ಸೈನಿಕರು ಇಂದು ಬೆಳಗ್ಗೆಯಿಂದ ಬಾರಾಮುಲ್ಲಾ, ಕುಪ್ವಾರಾ ಸೇರಿದಂತೆ ಹಲವೆಡೆ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಗೆ ಭಾರತೀಯ ಸೇನೆಯ ಇಬ್ಬರು ಯೋಧರು ಹಾಗೂ ನಾಲ್ವರು ನಾಗರೀಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸುತ್ತಿರುವ ಭಾರತೀಯ ಯೋಧರು ಪಾಕಿಸ್ತಾನ ಸೇನೆಯ 8 ಸೈನಿಕರನ್ನು ಹೊಡೆದುರುಳಿಸಿದ್ದು, 10 ರಿಂದ 12 ಮಂದಿ ಗಾಯಗೊಂಡಿದ್ದಾರೆ. ಹಾಗೂ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಸೇರಿದ ಇಂಧನ ಸಂಗ್ರಹ ಮಾಡುವ ಸ್ಥಳಗಳು ಹಾಗೂ ಬಂಕರ್ ಗಳ ಮೇಲೆ ದಾಳಿ ನಡೆಸಿದೆ ಎಂದು ಸೇನಾ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.