ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರಾಗಿ ಲೆ.ಜನರಲ್ ಮನೋಜ್ ಮುಕುಂದ್ ನಾರವಾನೆ ನೇಮಕ…

172
firstsuddi

ನವದೆಹಲಿ : ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇದೇ ತಿಂಗಳ 31ರಂದು ಜನರಲ್ ಬಿಪಿನ್ ರಾವತ್ ಅವರ ಅಧಿಕಾರವಧಿ ಕೊನೊಗಳ್ಳಲಿದ್ದು, ಹೀಗಾಗಿ ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಾನೆ ಅವರನ್ನು ನೇಮಕ ಮಾಡಿದ್ದು, ಈ ಕುರಿತು ಅಧಿಕೃತ ಘೋಷಣೆ ಶೀಘ್ರವೇ ಹೊರಬೀಳಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಮನೋಜ್ ಮುಕುಂದ್ ಅವರು ಈ ಮೊದಲು ಭಾರತೀಯ ಸೇನೆಯ ಪೂರ್ವ ಕಮಾಂಡ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು 1980ರ ಜೂನ್‍ನಲ್ಲಿ ಸಿಖ್ ಲೈಟ್ ರೆಜಿಮೆಂಟ್ 7ನೇ ಬೆಟಾಲಿಯನ್ ಮೂಲಕ ಭಾರತೀಯ ಸೇನೆಗೆ ಸೇರ್ಪಡೆಯಾದರು.