ಭಾರತ್ ಜೋಡೋ : ಪುಟ್ಟ ಬಾಲಕನ ಕರಾಟೆ ಪಟ್ಟು ಸರಿಪಡಿಸಿದ ರಾಹುಲ್ ಗಾಂಧಿ.

42
firstsuddi

ಹೈದರಾಬಾದ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸದ್ಯ ತೆಲಂಗಾಣ ರಾಜ್ಯದಲ್ಲಿ ಸಾಗುತ್ತಿದೆ. ಇಂದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಕೆಲವು ಕ್ಷಣವನ್ನು ಕಾಂಗ್ರೆಸ್ ಹಂಚಿಕೊಂಡಿದೆ. ರಾಹುಲ್ ಗಾಂಧಿ ಎದುರು ಚಿಕ್ಕ ಬಾಲಕನೊಬ್ಬ ಕರಾಟೆ ಪ್ರದರ್ಶಿಸುವಾಗ ರಾಹುಲ್ ಗಾಂಧಿ ಆ ಬಾಲಕನ ಕರಾಟೆ ಪಟ್ಟುಗಳನ್ನು ಸರಿಪಡಿಸುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.

ತಂತ್ರವು ತಪ್ಪಾಗಿದ್ದರೆ ದೇಶವು ವಿನಾಶದ ಹಾದಿಗೆ ಹೋಗುತ್ತದೆ. ಇದು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ. ರಾಹುಲ್ ಗಾಂಧಿ ಅವರು ಮಗುವಿಗೆ ಸರಿಯಾದ ತಂತ್ರವನ್ನು ತೋರಿಸಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಬಿಜೆಪಿ ಕಾಲೆಳೆದಿದೆ.