ಮಗನಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧ, ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ : ರೇಣುಕಾಚಾರ್ಯ.

54
firstsuddi

ದಾವಣಗೆರೆ : ಮಗ ಚಂದ್ರಶೇಖರ್ ಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ. ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವೆ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಹೇಳಿದ್ದಾರೆ.

ಹೊನ್ನಾಳಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಸಹೋದರನ ಮಗನನ್ನು ಅಪಹರಣ ಮಾಡಿದ್ದಾರೆ. ಅವರ ಬೇಡಿಕೆ ಏನಾದರೂ ಇದ್ದರೆ ಹೇಳಲಿ ಬಗೆಹರಿಸುವೆ. ಪೊಲೀಸ್ ದೂರು ಕೂಡ ನೀಡಲ್ಲ ಎಂದು ಕಣ್ಣೀರಿಟ್ಟರು.

ನನ್ನ ಮಗ ಚಂದ್ರು ಕಾಣೆಯಾಗಿ 5 ದಿನ ಆಯ್ತು. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಕೂಡ ಆತನಿಗೆ ಇಲ್ಲ. ದೊಡ್ಡಪ್ಪನ ಪರವಾಗಿ, ಕ್ಷೇತ್ರದ ಪರವಾಗಿ ಓಡಾಟ ನಡೆಸಿದ್ದ. ಶಿವಮೊಗ್ಗಕ್ಕೆ ನಮ್ಮ ಗಾಡಿಯಲ್ಲಿಯೇ ನನ್ನ ಮಗ ಹೋಗಿದ್ದ. ಶಿವಮೊಗ್ಗದಿಂದ ಗೌರಿ ಗದ್ದೆಗೆ ನಮ್ಮ ಗಾಡಿ ಪಾಸ್ ಆಗಿಲ್ಲ. ಗುರೂಜಿ ಹತ್ತಿರ ಹೋದಾಗ ಆಶೀರ್ವಾದ ಮಾಡಿದ್ದಾರೆ. ಗ್ರೇ ಕಲರ್ ಗಾಡಿಯಲ್ಲಿ ಆಶ್ರಮಕ್ಕೆ ಹೋಗಿದ್ದು. ನಮ್ಮ ಗಾಡಿ ಶಿವಮೊಗ್ಗದಿಂದ ಔಟ್ ಗೋಯಿಂಗ್ ಇಲ್ಲ, ಇನ್ ಕಮಿಂಗ್ ಇಲ್ಲ. ಆದರೆ ನಮ್ಮ ಗಾಡಿ ಎಲ್ಲಿಗೆ ಹೋಯ್ತು ಎನ್ನುವುದು ತಿಳಿಯುತ್ತಿಲ್ಲ. ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ಪೊಲೀಸ್ ಮೂಲಗಳ ಪ್ರಕಾರ ಗಾಡಿ ಮನೆಗೆ ಬಂದಿದೆ ಎನ್ನುತ್ತಾರೆ. ಆದರೆ ಸಿಸಿ ಕ್ಯಾಮೆರಾದಲ್ಲಿ ನೋಡಿದಾಗ ನನ್ನ ಮಗನ ಕಾರಿನ ಹಿಂದೆ ಸ್ವಿಫ್ಟ್ ಡಿಸೈರ್ ಕಾರು ಬರುತ್ತಿದೆ. ಯಾರು ಅಪಹರಿಸಿದ್ದಾರೋ ಅವರ ಡಿಮ್ಯಾಂಡ್ ನಾನು ಪೂರೈಸುತ್ತೇನೆ ಎಂದು ಹೇಳಿದರು.

ಎಲ್ಲಾ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ನಮ್ಮ ಮಗನ ಕಾರು ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಕೇವಲ ಡೈವರ್ಟ್ ಮಾಡಲು ಈ ರೀತಿಯಾಗಿ ಕಾರು ಕಳಿಸಿದ್ದಾರೆ. ವಿನಯ್ ಗುರೂಜಿ ಕರೆ ಮಾಡಿ ಗ್ರೇ ಕಲರ್ ಗಾಡಿಯಲ್ಲಿ ಬಂದಿದ್ದರು ಎಂದು ಹೇಳಿದ್ದಾರೆ. ತನಿಖೆ ವಿಳಂಬದ ಬಗ್ಗೆ ನಾನು ಏನು ಕೂಡ ಮಾತನಾಡುವುದಿಲ್ಲ. ನಾನು ಕೂಡ ಪಾರ್ಟ್ ಆಫ್ ಗೌವರ್ನಮೆಂಟ್. ಎಸ್ ಪಿ ಯವರು ಕೂಡ ಉತ್ತಮ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ನಾನು ಅವರ ಮೇಲೆ ಆರೋಪ ಮಾಡುವುದು ಈ ಸಮಯದಲ್ಲಿ ಸರಿಯಲ್ಲ. ಅದಷ್ಟು ಬೇಗ ತನಿಖೆ ಮುಗಿಯುತ್ತದೆ ಎನ್ನುವ ನಂಬಿಕೆ ಇದೆ ಎಂದರು.