ಭಾರತ್ ಜೋಡೋ ಯಾತ್ರೆ – ರಾಹುಲ್ ಜೊತೆ ಹೆಜ್ಜೆ ಹಾಕಿದ ಸೋನಿಯಾ.

52
firstsuddi

ಮಂಡ್ಯ: ಎರಡು ದಿನಗಳ ವಿಶ್ರಾಂತಿ ಬಳಿಕ ಇಂದಿನಿಂದ ಭಾರತ್ ಜೋಡೋ ಯಾತ್ರೆ ಮತ್ತೆ ಪುನಾರಂಭವಾಗಿದೆ.

ಇಂದು ಬೆಳಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಐಕ್ಯತಾ ಯಾತ್ರೆ ಮಂಡ್ಯದ ಪಾಂಡವಪುರದ ಬೆಳ್ಳಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರಂಭವಾದಾಗ ಸುಮಾರು 10 ನಿಮಿಷಗಳ ಕಾಲ ಸೋನಿಯಾ ಗಾಂಧಿ ಹೆಜ್ಜೆ ಹಾಕಿದರು. ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹುರುಪಿನಿಂದ ಹೆಜ್ಜೆ ಹಾಕಿದರು.

ಬೆಳಗ್ಗೆ 11 ಗಂಟೆವರೆಗೆ ಪಾದಯಾತ್ರೆ ಮಾಡಿ ಬಳಿಕ ಖಾರಾದ್ಯ ಕೆರೆ ಬಳಿ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ 4 ಗಂಟೆಗೆ ಖಾರಾದ್ಯ ಕೆರೆಯಿಂದ ಆರಂಭವಾಗುವ ಪಾದಯಾತ್ರೆ ಸಂಜೆ 7 ಗಂಟೆಗೆ ಮಂಡ್ಯದ ಬ್ರಹ್ಮದೇವರ ಹಳ್ಳಿ ಗ್ರಾಮ ತಲುಪಲಿದೆ.

ಅಕ್ಟೋಬರ್ 3ರಂದು ಮೈಸೂರಿಗೆ ಬಂದಿರುವ ಸೋನಿಯಾ ಗಾಂಧಿ ಅವರು ಕಬಿನಿಯ ಹಿನ್ನಿರಿನಲ್ಲಿರುವ ಆರೆಂಜ್ ಕೌಂಟಿ ರೆಸಾರ್ಟ್ ನಲ್ಲಿ ವ್ಯಾಸ್ತವ್ಯ ಮಾಡಿದ್ರು. ಇಂದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.