ನವದೆಹಲಿ : ಭಾರತ್ ಬಯೋಟೆಕ್ ನ ಇಂಟ್ರಾನಾಸಲ್ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಒಪ್ಪಿಗೆ ನೀಡಿದೆ.
ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಇಂದು ಮೂರನೇ ಹಂತದ ವ್ಯಾಕ್ಸಿನ್ ಗೆ ಚಾಲನೆ ನೀಡಿದ್ದು, ದೇಶದ 9 ಸ್ಥಳಗಳಲ್ಲಿ ಇದರ ಪ್ರಯೋಗ ನಡೆಯುತ್ತಿದೆ. ಇಂಟ್ರಾನಾಸಲ್ ಬೂಸ್ಟರ್ ಡೋಸ್ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯುವಲ್ಲಿ ಬಹಳ ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ.
ಕೋವ್ಯಾಕ್ಸಿನ್ ನ ಎರಡು ಡೋಸ್ ಪಡೆದವರು ಮೂರನೇ ಲಸಿಕೆಯಾಗಿ ಇಂಟ್ರಾನಾಸಲ್(ಮೂಗಿನ ಮೂಲಕ ನೀಡಲಾಗುವ ಲಸಿಕೆ) ಬೂಸ್ಟರ್ ಡೋಸ್ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.










