ನವದೆಹಲಿ : ಭಾರತ ಕ್ರಿಕೆಟ್ ತಂಡ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಗೆದ್ದು ದೇಶಕ್ಕೆ ಕೀರ್ತಿಯನ್ನು ತಂದು ಇಂದಿಗೆ 36ವರ್ಷಗಳಾಗಿದ್ದು, 1983ರ ಜೂನ್ 25ರಂದು ಲಂಡನ್ನ ಲಾಡ್ರ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ವೆಸ್ಟ್ಇಂಡೀಸ್ ಕ್ರಿಕೆಟ್ ತಂಡದ ನಡುವೆ ಫೈನಲ್ ಪಂದ್ಯ ಎದುರಾಗಿದ್ದು, ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ 183 ರನ್ ಗಳಿಸಿತ್ತು. ಬಳಿಕ 184 ರನ್ಗಳ ಗುರಿ ಬೆನ್ನತ್ತಿದ ವೆಸ್ಟ್ಇಂಡೀಸ್ ತಂಡ 140 ರನ್ಗಳಿಗೆ ಆಲೌಟ್ ಆಗಿದ್ದು, ಭಾರತ ತಂಡ 43 ರನ್ಗಳಿಂದ ಗೆಲುವು ಸಾಧಿಸಿತ್ತು. ಭಾರತ ತಂಡದ ಪರವಾಗಿ ಉತ್ತಮವಾಗಿ ಬೌಲಿಂಗ್ ಮಾಡಿದ ಮದನ್ ಲಾಲ್ ಹಾಗೂ ಅಮರ್ನಾಥ್ ಅವರು ತಲಾ ಮೂರು ವಿಕೆಟ್ಗಳನ್ನು ಪಡೆದಿದ್ದು, ಭಾರತ ಕ್ರಿಕೆಟ್ ತಂಡ ಅಂದು ವಿಶ್ವಕಪ್ ಗೆದ್ದು ದೇಶದ ಹಿರಿಮೆಯನ್ನು ಎತ್ತಿ ಹಿಡಿದರು.










