ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪ…

72
firstsuddi

ನವದೆಹಲಿ : ಇಂದು ಮುಂಜಾನೆ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಮುಂಜಾನೆ ಸುಮಾರು 5:15 ಗಂಟೆಗೆ ಮೊದಲ ಬಾರಿ ಭೂಮಿ ಕಂಪಿಸಿದರೆ, 5:53 ಕ್ಕೆ ಎರಡನೇ ಬಾರಿ ಕಂಪಿಸಿದೆ. ಭೂಕಂಪವು ಬಾಂಗ್ಲಾದೇಶದ ಚಿತ್ತಗಾಂಗ್ ನಿಂದ 175 ಕಿಮೀ ಪೂರ್ವಕ್ಕೆ ಅಪ್ಪಳಿಸಿದೆ. ತ್ರಿಪುರಾ, ಮಣಿಪುರ, ಮಿಜೋರಾಂ ಮತ್ತು ಅಸ್ಸಾಂನಲ್ಲಿಯೂ ಕಂಪನದ ಅನುಭವವಾಗಿದೆ.

ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರದ (ಇಎಮ್ಎಸ್ಸಿ) ವೆಬ್ಸೈಟ್ ನಲ್ಲಿ ಕೋಲ್ಕತ್ತಾದವರೆಗೆ ಭೂಕಂಪದ ಅನುಭವವಾಗಿದೆ ಎಂದು ತಿಳಿಸಲಾಗಿದೆ.