ಭೂಮಿಯ ರಕ್ಷಣೆಗೆ ನಾಸಾದ ಪ್ಲಾನ್ – ಡಾರ್ಟ್ ನೌಕೆಯಿಂದ ಕ್ಷುದ್ರಗ್ರಹಕ್ಕೆ ಡಿಕ್ಕಿ…

72
firstsuddi

ವಾಷಿಂಗ್ಟನ್: ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಾಸಾ(NASA) ಬಾಹ್ಯಾಕಾಶ ನೌಕೆಯಿಂದ ಸಣ್ಣ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಸಿದೆ. ಈ ಮೂಲಕ ಭವಿಷ್ಯದಲ್ಲಿ ಕ್ಷುದ್ರಗ್ರಹ ಅಥವಾ ಧೂಮಕೇತುಗಳು ಭೂಮಿಗೆ ಅಪ್ಪಳಿಸುವುದರ ಅಪಾಯಗಳಿಂದ ಭೂಮಿಯನ್ನು ರಕ್ಷಿಸುವ ತಂತ್ರಜ್ಞಾನವನ್ನು ಪರೀಕ್ಷಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ.

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಡಬಲ್ ಕ್ಷುದ್ರಗ್ರಹ ರೆಂಡೆಜ್ವಸ್ ಟೆಸ್ಟ್ (DART) ಪ್ರೋಬ್ ಅನ್ನು ಸೆಪ್ಟೆಂಬರ್ 26ರ ರಾತ್ರಿ ಹಾರಿ ಬಿಟ್ಟಿದ್ದು, ಭೂಮಿಯಿಂದ 7 ಮಿಲಿಯನ್ ಮೈಲಿ (11 ಮಿಲಿಯನ್ ಕಿಲೋಮೀಟರ್) ದೂರದಲ್ಲಿರುವ ಕ್ಷುದ್ರಗ್ರಹಕ್ಕೆ ಅದು ಅಪ್ಪಳಿಸಿದೆ. ಇದನ್ನು ಯುಎಸ್ ಬಾಹ್ಯಾಕಾಶ ಸಂಸ್ಥೆ ವಿಶ್ವದ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆ ಎಂದು ಹೇಳಿದೆ.

ನಾವು ಹೊಸ ಯುಗವನ್ನು ಪ್ರಾರಂಭಿಸುತ್ತಿದ್ದೇವೆ, ಅಪಾಯಕಾರಿ ಕ್ಷುದ್ರಗ್ರಹದ ಪ್ರಭಾವದಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ನಮ್ಮ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆಯು ಯಶಸ್ವಿಯಾಗಿದೆ. ಭೂಮಿಯಲ್ಲಿರುವ ಜನರು ಚೆನ್ನಾಗಿ ನಿದ್ರಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ನಾಸಾದ ಗ್ರಹಗಳ ವಿಜ್ಞಾನ ವಿಭಾಗದ ನಿರ್ದೇಶಕ ಲೋರಿ ಗ್ಲೇಜ್ ಹೇಳಿದ್ದಾರೆ.