ಮಂಗಳೂರು: ನಗರದ ಲೇಡಿಹಿಲ್ನ ಮಂಗಳಾ ಈಜುಕೊಳದಲ್ಲಿ ಮುಳುಗಿ ಯುವಕನೊಬ್ಬ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಮೃತ ಯುವಕನನ್ನು ಅಭಿಷೇಕ್ ಆನಂದ್ (30) ಎಂದು ಗುರುತಿಸಲಾಗಿದೆ. ಈತ ಹರಿಯಾಣದ ಗುರುಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ನಿನ್ನೆ ಸಂಜೆ 4.45 ರಿಂದ 5 ಗಂಟೆಯ ನಡುವೆ ಅಭಿಷೇಕ್ ಆನಂದ್, ಮಂಗಳಾ ಈಜುಕೊಳದಲ್ಲಿ ಈಜುತ್ತಿದ್ದಾಗ ಏಕಾಏಕಿ ನೀರಿನಲ್ಲಿ ಮುಳುಗಿದ್ದಾರೆ. ಕೂಡಲೇ ಜೀವರಕ್ಷಕರು ಅವರನ್ನು ಈಜುಕೊಳದಿಂದ ಮೇಲಕ್ಕೆಳೆದು ಆಸ್ಪತ್ರೆಗೆ ಸಾಗಿಸಿದರೂ, ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.










