ಮಂಗಳೂರು : ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಸಂದರ್ಭ ಅತ್ಯುತ್ತಮ ವರದಿ ತೋರಿಸಿದ ದಿಗ್ವಿಜಯ ನ್ಯೂಸ್ ಕನ್ನಡ ಸುದ್ದಿ ವಾಹಿನಿಯ ಮಂಗಳೂರು ವರದಿಗಾರ ಅಶೋಕ್ ಪೂಜಾರಿಯವರಿಗೆ ರಾಷ್ಟ್ರೀಯ ಟೆಲಿವಿಷನ್ ಅವಾರ್ಡ್ ಗೌರವ ಲಭಿಸಿದೆ.
ಯುವ ವರದಿಗಾರ ಅಶೋಕ್ ಪೂಜಾರಿಯವರು ಟಿವಿ ವರದಿಗಾರಿಕೆಯಲ್ಲಿ ಉತ್ತಮ ಹಿಡಿತವನ್ನು ಹೊಂದಿದ್ದು ಈ ಮೊದಲು ಪ್ರಜಾ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ, ಬಳಿಕ ದಿಗ್ವಿಜಯ ವಾಹಿನಿಗೆ ಸೇರ್ಪಡೆಗೊಂಡಿದ್ದರು. ವರ್ಷದ ಹಿಂದಷ್ಟೆ ಉಡುಪಿಯಿಂದ ಮಂಗಳೂರಿಗೆ ವರ್ಗಾವಣೆಗೊಂಡ ಅಶೋಕ್ ಅವರು ತಮ್ಮ ಅತ್ಯುತ್ತಮ ವರದಿಗಾರಕೆಯಿಂದ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದರು.
ಮಂಗಳೂರು ಗೋಲಿಬಾರ್ ಘಟನೆಯ ಕ್ಷಿಷ್ಟಕರ ಸಮಯದಲ್ಲೂ ಕೂಡ ದೈರ್ಯದಿಂದ ವರದಿಗಾರಿಕೆ ಮಾಡಿ ವೀಕ್ಷಕರ ಮನಗೆದ್ದಿದ್ದರು. ಅವರ ಸಾಧನೆಯನ್ನು ಗಮನಿಸಿದ ಇಂಡಿಯನ್ ಟೆಲಿವಿಷನ್ ನ್ಯೂಸ್ ಡಾಟ್ ಕಾಮ್ ಮಾಧ್ಯಮ ಸಂಸ್ಥೆ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ










