ಮಂಗಳೂರು : ನೋಡ ನೋಡುತ್ತಿದ್ದಂತೆ ನಡು ರಸ್ತೆಯಲ್ಲೇ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಜೆಪ್ಪು ಮಾರುಕಟ್ಟೆಯಲ್ಲಿ ನಡೆದಿದೆ. ಮಾರುಕಟ್ಟೆಯ ಗ್ಯಾಸ್ ಏಜೇನ್ಸಿ ಅಂಗಡಿಯಲ್ಲಿ ಗ್ಯಾಸ್ ಲೀಕ್ ಆಗಿದ್ದು, ಹೀಗಾಗಿ ಸ್ಥಳೀಯರು ಅಂಗಡಿಯಿಂದ ಸಿಲಿಂಡರನ್ನು ಹೊರಗೆ ತಂದು ಇಟ್ಟಿದ್ದರು. ಹೊರಗೆ ಇಡುವಷ್ಟರಲ್ಲೇ ಸಿಲಿಂಡರ್ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಪೋಟಗೊಂಡಿದ್ದು, ಸ್ಪೋಟದ ತೀವ್ರತೆಗೆ ಸಿಲಿಂಡರ್ 50 ಮೀ. ಎತ್ತರಕ್ಕೆ ಚಿಮ್ಮಿದೆ. ಸಿಲಿಂಡರ್ ಸ್ಪೋಟಗೊಳ್ಳುವಾಗ ಪಕ್ಕದ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಅದೃಷ್ಟಾವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.










