ಮಕ್ಕಾದಿಂದ ಆಗಮಿಸಿದ ಮಹಿಳೆಗೆ ಕೊರೋನಾ ಶಂಕೆ – ಮಣಿಪಾಲ ಆಸ್ಪತ್ರೆಗೆ ದಾಖಲು…!

274
firstsuddi

ಉಡುಪಿ: ಮಕ್ಕಾ ಪ್ರವಾಸ ಮುಗಿಸಿ ವಾಪಾಸಾದ ಸಾಗರ ಮೂಲದ ಮಹಿಳೆಗೆ ಜ್ವರ ಶೀತ ಹಾಗೂ ಉಸಿರಾಟದ ಸಮಸ್ಯೆ ಕಂಡು ಬಂದ ಹಿನ್ನಲೆಯಲ್ಲಿ ಮಣಿಪಾಲದ ಕೆ.ಎಮ್.ಸಿ ಆಸ್ಪತ್ರೆಯ ಐಸೋಲೇಶನ್ ವಾರ್ಡಿಗೆ ಬುಧವಾರ ದಾಖಲಿಸಿದ್ದಾರೆ. ಮಕ್ಕಾ ಯಾತ್ರೆಗೆ ತೆರಳಿದ್ದ ಸಾಗರ ಮೂಲದ ಮಹಿಳೆಗೆ ಜ್ವರ ಶೀತದ ಸಮಸ್ಯೆ ಕಂಡುಬಂದಿದ್ದು ಅಲ್ಲಿ ಚಿಕಿತ್ಸೆ ಪಡೆದ ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿಗೆ ವಾಪಾಸಾದ ಮಹಿಳೆಗೆ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗಿತ್ತು. ಬಳಿಕ ಶಿವಮೊಗ್ಗಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಆದರೂ ಗುಣಮುಖವಾಗದ ಕಾರಣ ಮಣಿಪಾಲಕ್ಕೆ ದಾಖಲು ಮಾಡಲಾಗಿದೆ. ಮಹಿಳೆಯ ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ಲ್ಯಾಬ್ ಗೆ ಕಳುಹಿಸಲಾಗಿದ್ದು, ವರದಿಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಕಾಯುತ್ತಿದೆ.